ಚಿನ್ನಾಭರಣ ಪ್ರೇಮಿಗಳ ಫರ್ಸ್ಟ್ ಚಾಯ್ಸ್ ಜಿ.ಎಲ್ ಆಚಾರ್ಯ ಜ್ಯುವೆಲ್ಸ್ ನಲ್ಲಿ ‘ಫ್ಲ್ಯಾಶ್ ಸೇಲ್’ ಧಮಾಕಾ

0

ಫೆ.19 ರಿಂದ ಫೆ.25ರವರೆಗೆ ಚಿನ್ನ ಹಾಗೂ ವಜ್ರಾಭರಣಗಳ ಮೇಲೆ ವಿಶೇಷ ಕೊಡುಗೆಗಳು

ಪುತ್ತೂರು: ಮುತ್ತು ಬೆಳೆದ ಊರಿನಲ್ಲಿ ಸ್ಥಾಪನೆಗೊಂಡು ಇದೀಗ ಕರಾವಳಿ ಮಾತ್ರವಲ್ಲದೆ ಮಲೆನಾಡು ಭಾಗದಲ್ಲೂ ಚಿನ್ನದ ವ್ಯವಹಾರದಲ್ಲಿ ‘ವಿಶ್ವಾಸಾರ್ಹತೆಯ ಅಪರಂಜಿ’ಯಾಗಿ ಹೊಳೆಯುತ್ತಿರುವ, ವೈವಿಧ್ಯ ಹಾಗೂ ಪಾರಂಪರಿಕ ಚಿನ್ನಾಭರಣಗಳಿಗೆ ಹೆಸರುವಾಸಿಯಾಗಿರುವ ಜಿ.ಎಲ್. ಆಚಾರ್ಯ ಜ್ಯುವೆಲ್ಸ್ ಇದೀಗ ಫ್ಲ್ಯಾಶ್ ಸೇಲ್ ಮೂಲಕ ಗ್ರಾಹಕರ ಮುಂದೆ ಬಂದಿದೆ.


ಚಿನ್ನಾಭರಣ ಹಾಗೂ ವಜ್ರಾಭರಣಗಳ ಮೇಲೆ ಈ ಫ್ಲ್ಯಾಶ್ ಸೇಲ್ ನಡೆಯಲಿದ್ದು, ಫೆ.19 ರಿಂದ 25ರವರೆಗೆ ಈ ಕೊಡುಗೆ ಲಭ್ಯವಿರಲಿದೆ.
ಚಿನ್ನಾಭರಣ ಖರೀದಿಗೆ ಪ್ರತಿ ಗ್ರಾಂಗೆ ರೂ. 150ರವೆರೆಗೆ ರಿಯಾಯಿತಿ, ವಜ್ರಾಭರಣಗಳ ಮೇಲೆ ರೂ.7000ದವರೆಗೆ ಪ್ರತಿ ಕ್ಯಾರೆಟ್ ಮೇಲೆ ರಿಯಾಯಿತಿ ದೊರಕಲಿದೆ.


2 000ಕ್ಕೂ ಮಿಕ್ಕಿದ ಡಿಸೈನ್ ಗಳಲ್ಲಿ ಕಣ್ಮನ ಸೆಳೆಯುವ ಗ್ಲೋ ಆಭರಣಗಳು, ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳ ಆಯ್ಕೆ ಲಭ್ಯವಿದೆ.
ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ, ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಗುಣಮಟ್ಟದ ವಜ್ರಾಭರಣಗಳು ಲಭ್ಯವಿದ್ದು, ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ.


ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿ ಮಳಿಗೆಗಳನ್ನು ಹೊಂದಿದೆ.
ಷರತ್ತುಗಳ ಅನ್ವಯದೊಂದಿಗೆ ‘ಫ್ಲ್ಯಾಶ್ ಸೇಲ್’ ಪುತ್ತೂರು, ಸುಳ್ಯ, ಮೂಡಬಿದ್ರೆ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.