ಸುಳ್ಯದಿಂದ ಜಟ್ಟಿಪಳ್ಳ -ಕೊಡಿಯಾಲಬೈಲ್ ರಸ್ತೆ ಡಾಮರೀಕರಣ ಕಾಮಗಾರಿ ಇಂದಿನಿಂದ ಆರಂಭಗೊಂಡಿದೆ.
ಈ ರಸ್ತೆಯು ಹೊಂಡ ಗುಂಡಿಗಳಿಂದ ಕೂಡಿದ್ದು ರಸ್ತೆ ಅಭಿವೃದ್ಧಿಯಾಗದೆ ವಾಹನ ಸವಾರರು ಮತ್ತು ಶಾಲಾ ಮಕ್ಕಳು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದರು. ಇದರ ದುರಸ್ತಿಗಾಗಿ ಪ್ರತಿಭಟನೆಗಳೂ ನಡೆದಿದ್ದವು.
ಇದೀಗ ಜಟ್ಟಿಪಳ್ಳ ಕೊಡಿಯಾಲಬೈಲ್ ರಸ್ತೆಗೆ ನಗರ ಪಂಚಾಯತ್ ಅನುದಾನದಿಂದ ಡಾಮರೀಕರಣ ಕೆಲಸ ಆರಂಭಗೊಂಡಿದೆ.
ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪತ್ರಕರ್ತ ಶರೀಫ್ ಜಟ್ಟಿಪಳ್ಳರವರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳು ಸ್ಥಳಕ್ಕೆ ಬಂದು ರಸ್ತೆ ಅಭಿವೃದ್ಧಿ ಭರವಸೆ ನೀಡಿದ್ದರು.
ಸುಳ್ಯದ ರಿಕ್ಷಾ ಯೂನಿಯನ್ ನವರು ನ.ಪಂ. ಎದುರು ಪ್ರತಿಭಟನೆ ನಡೆಸಿ ರಸ್ತೆ ದುರಸ್ತಿಗೆ ಆಗ್ರಹಿಸಿದ್ದರು.
ಡಾಮರೀಕರಣ ಆರಂಭ
ಡಾಮರಿಕರಣ ಕೆಲಸ ಅರಂಭ ಸುಳ್ಯ ನಗರ ಪಂಚಾಯತ್ ಇಂಜಿನಿಯರ್ ಶ್ರೀಧರ್, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನ.ಪಂ ಸದಸ್ಯ ಉಮ್ಮರ್ ಕೆ.ಎಸ್, ಸ್ಥಳೀಯರಾದ ಹರಿಶ್ಚಂದ್ರ ಎಂ.ಆರ್. ಕಾನತ್ತಿಲ, ಕುಲದೀಪ್ ಪೆಲ್ತಡ್ಕ, ಎನ್.ಎ. ಅಬ್ದುಲ್ಲಾ, ಮಾಧವ ಜಟ್ಟಿಪಳ್ಳ, ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾಮಗಾರಿ ವೀಕ್ಷಿಸಿದರು.