ಕೊಲ್ಲಮೊಗ್ರ ಪತ್ರಕರ್ತರ ಗ್ರಾಮ ವಾಸ್ತವ್ಯ ಹಿನ್ನೆಲೆ

0

ಬೆಂಡೋಡಿ ಶಾಲಾ ಮಕ್ಕಳಿಂದ ವಿಧಾನ ಮಂಡಲ ಅಧಿವೇಶನ ವೀಕ್ಷಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನ ಸಭಾ ಸಭಾಪತಿ ಯು.ಟಿ ಖಾದರ್ ಗೆ ಮನವಿ ಅರ್ಪಣೆ

ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಫೆ.20 ರಂದು ಬೆಂಗಳೂರಿನಲ್ಲಿ ವಿಧಾನಮಂಡಲದ ಅಧಿವೇಶನ ವೀಕ್ಷಣೆಯನ್ನು ಮಾಡಿದ್ದಾರೆ.

ಕೊಲ್ಲಮೊಗ್ರ ಪತ್ರಕರ್ತರ ಗ್ರಾಮ ವಾಸ್ತವ್ಯ ಹಿನ್ನೆಲೆ ಹಲವು ಬೇಡಿಕೆಗಳು ಬಂದಿದ್ದು ಅದಕ್ಕೆ ಸಂಬಂಧಿಸಿದ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನ ಸಭಾ ನಾಯಕ ಯು..ಟಿ ಖಾದರ್ ಅವರಿಗೆ ಶಾಸಕಿ ಭಾಗೀರಥಿ ಮುರಳ್ಯ ಅವರಿದ್ದು ಮನವಿ ನೀಡಿದರು.

ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನ ಲೋಕೇಶ್ ಬಿ.ಎನ್, ಕೊಲ್ಲಮೊಗ್ರುವಿನ ಮಾದವ ಚಾಂತಾಳ, ಉದಯ ಶಿವಾಲ, ಹರಿಪ್ರಸಾದ್ ಮಲ್ಲಾಜೆ ಮತ್ತಿತರರು ಜತೆಗಿದ್ದಾರೆ.