ಶ್ರೀಮತಿ ಲಲಿತಾ ಚಿಲ್ಪಾರು ನಿಧನ

0

ಅಮರಮುಡ್ನೂರು ಗ್ರಾಮದ ಚಿಲ್ಪಾರು ದಿ.ದಾಮೋದರ ಗೌಡ ರವರ ಪತ್ನಿ ಶ್ರೀಮತಿ ಲಲಿತಾ ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ ಜಯದೀಪ್ ಪೈಲಾರು, ಪುತ್ರಿಯರಾದ ಶ್ರೀಮತಿ ವಾರಿಜಾಕ್ಷಿ, ಶ್ರೀಮತಿ ಶಾರದಾ, ಶ್ರೀಮತಿ ವಿಶಾಲಾಕ್ಷಿ, ಶ್ರೀಮತಿ ಪ್ರೇಮಲತಾ, ಅಳಿಯಂದಿರಾದ ಪದ್ಮನಾಭ ದೇವಸ್ಯ, ಗಂಗಾಧರ ಮಲ್ಲಾರ, ಸುಂದರ ಗೌಡ ಕೋಡಿಂಬಾಳ, ಸೊಸೆ ಶ್ರೀಮತಿ ಲತಾ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.