ಸುಬ್ರಹ್ಮಣ್ಯದಲ್ಲಿ ಶ್ರೀ ರಾಘವೇಂದ್ರ ಬೇಕರಿ & ಕೋಲ್ಡ್ ಹೌಸ್ ಶುಭಾರಂಭ

0

ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ.ಸಿ ಬಸ್ ತಂಗುದಾಣದ ನಂದಶ್ರೀ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ರಾಘವೇಂದ್ರ ಬೇಕರಿ & ಕೋಲ್ಡ್ ಹೌಸ್ ಇಂದು ಶುಭಾರಂಭಗೊಂಡಿತು.

ನಂದಶ್ರೀ ವಾಣಿಜ್ಯ ಸಂಕೀರ್ಣದ ಮಾಲಕರಾದ ಶ್ರೀಮತಿ ನಿರ್ಮಲಾ ಬಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಜಾತ, ಶ್ರೀಮತಿ ಸುಜಾತ, ಗುತ್ತಿಗಾರು ಪಿ.ಎ.ಸಿ.ಎಸ್. ವೆಂಕಟ್ ದಂಬೆಕೋಡಿ, ಮಾಜಿ ಜಿ.ಪಂ. ಸದಸ್ಯ ಭರತ್ ಮುಂಡೋಡಿ, ಹೊಟೆಲ್ ನ್ಯೂ ಮೈಸೂರು ಕೆಫೆ ಮಾಲಕರಾದ ಹರೀಶ್ ಕಾಮತ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಸುಬ್ರಹ್ಮಣ್ಯದ ರಾಘವೇಂದ್ರ ಪ್ರಸಾದ್ ಹೊಟೆಲ್ ಮಾಲಕ ಯಜ್ಞೇಶ್ ಆಚಾರ್ ಭಾಗವಹಿಸಿದ್ದರು.

ಗುತ್ತಿಗಾರು ಪಾರ್ವತಿ ಮೆಡಿಕಲ್ ನ ಮಾಲಕರಾದ ಮರಿಯಪ್ಪ ಮಾವಾಜಿ, ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟಿನ ಸಂಚಾಲಕರಾದ ಡಾ. ರವಿ ಕಕ್ಕೆಪದವು, ಅಖಿಲ ಭಾರತ ಅಯ್ಯಪ್ಪ ಸೇವಾ ಟ್ರಸ್ಟಿನ ಅಧ್ಯಕ್ಷ ಉಮೇಶ್ ಕೆ‌.ಎನ್, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಹರೀಶ್ ಇಂಜಾಡಿ, ಕುಕ್ಕೆಶ್ರೀ ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಿವೇಕಾನಂದ ದೇವರಗದ್ದೆ, ಬಿ.ಎಂ.ಎಸ್. ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ದಿನೇಶ್ ಶಿರಾಡಿ, ಕಲ್ಲುಗುಂಡಿ ರಾಘವೇಂದ್ರ ಬೇಕರಿ ಮಾಲಕರಾದ ಸುನೀಲ್ ಕುಮಾರ್ ಕಲ್ಲುಗುಂಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ರಾಘವೇಂದ್ರ ಬೇಕರಿಯ ಮಾಲಕರಾದ ಶ್ರೀಮತಿ ಮತ್ತು ಶ್ರೀ ಅನಿಲ್ ಕುಮಾರ್ ಅತಿಥಿಗಳನ್ನು ಬರಮಾಡಿಕೊಂಡರು. ಕುಶಾಲಪ್ಪ ಪ್ರಾರ್ಥಿಸಿದರು.

ಕು. ಪ್ರಜ್ಞಾ ಒಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು. ದೀಪಕ್ ನಂಬಿಯಾರ್ ಸ್ವಾಗತಿಸಿದರು.