ಫೆ. 24, 25: ಕೊನ್ನಡ್ಕ ನೇಮೋತ್ಸವ

0

ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನ ಕೊನ್ನಡ್ಕದಲ್ಲಿ 9ನೇ ವರ್ಷದ ನೇಮೋತ್ಸವ ಫೆ. 24, 25ರಂದು ನಡೆಯಲಿದೆ.

ಫೆ. 24ರಂದು ಬೆಳಿಗ್ಗೆ ಗಣಪತಿ ಹವನ, ಸಂಜೆ 5 ಗಂಟೆಯಿಂದ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿ ಸಂಪ್ಯಾಡಿ ಇವರಿಂದ ಭಜನಾ ಕಾರ್ಯಕ್ರಮ, ಸಂಜೆ 6ರ ನಂತರ ನಾಗಬ್ರಹ್ಮರ ದರ್ಶನ, ಗುಳಿಗ ದೈವದ ನೇಮ ಬಳಿಕ ಅನ್ನಸಂತರ್ಪಣೆ, ರಾತ್ರಿ 9.30ರಿಂದ‌ ಮೊಗೇರ್ಕಳ ದೈವದ ಗರಡಿ ಇಳಿಯುವುದು, ರಾತ್ರಿ 1 ಗಂಟೆಗೆ ತನ್ನಿ ಮಾಣಿಗ ಗರಡಿ ಇಳಿಯುವುದು, ಬೆಳಿಗ್ಗೆ 5ಕ್ಕೆ ಮೊಗೇರ್ಕಳ ದೈವದ ಹರಿಕೆ ಸೇವೆ, ಹಾಲು ಕುಡಿಯುವುದು, ತರವಾಡು ಮನೆಗೆ ಹೋಗುವುದು ನಡೆಯಲಿದೆ.

ಫೆ. 25ರಂದು ಬೆಳಿಗ್ಗೆ 7.30ಕ್ಕೆ ಸ್ವಾಮಿ ಕೊರಗಜ್ಜ ದೈವದ ನೇಮ, ಗಂಧ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.