ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯಕ್ಕೆಸ್ನಾತ್ತಕೋತ್ತರ ವಿಭಾಗದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 06 ರ್‍ಯಾಂಕ್

0

ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ, ಇವರು ಜನವರಿ 2024ರಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಡಿ. /ಎಂ.ಎಸ್ಸ್(ಆಯುರ್ವೇದ) ಪರೀಕ್ಷೆಯಲ್ಲಿ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಂತಿಮ ಸ್ನಾತಕೋತ್ತರದ 06 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ರ್‍ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪಂಚಕರ್ಮ ವಿಭಾಗ ಮುಖ್ಯಸ್ಥರಾದ ಡಾ. ಸನತ್ ಕುಮಾರ್ ಡಿ. ಜಿ. ರವರ ಮಾರ್ಗದರ್ಶನದಲ್ಲಿ ಡಾ. ಗುರುಕಿರತ್ ಕೌರ್ ಪಂಚಕರ್ಮ ವಿಭಾಗದಲ್ಲಿ ನಾಲ್ಕನೇ ರ್‍ಯಾಂಕ್, ಡಾ. ಪ್ರತಿಮಾ ಎನ್.- ಎಂಟನೇ ರ್‍ಯಾಂಕ್ ನ್ನು ಪಡೆದಿರುತ್ತಾರೆ.


ಅಗದತಂತ್ರ ವಿಭಾಗ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ. ರವರ ಮಾರ್ಗದರ್ಶನದಲ್ಲಿ ಡಾ. ಶ್ರೇಯಾ ಎಸ್. ಶೆಟ್ಟಿ ಹಾಗೂ ಡಾ. ಸುರಭಿ ಪಿ., ಅಗದತಂತ್ರ ವಿಭಾಗದಲ್ಲಿ ಎಂಟನೇ ರ್‍ಯಾಂಕ್‌ನ್ನು ಪಡೆದಿರುತ್ತಾರೆ.

ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಭಾಗ ಮುಖ್ಯಸ್ಥರಾದ ಡಾ. ಪುರುಷೋತ್ತಮ ಕೆ. ಜಿ. ರವರ ಮಾರ್ಗದರ್ಶನದಲ್ಲಿ ಡಾ. ಅಂಬಿಲಿ ಕೆ. ಎಸ್., ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಷಯದಲ್ಲಿ ನಾಲ್ಕನೇ ರ್‍ಯಾಂಕ್‌ನ್ನು ಪಡೆದಿರುತ್ತಾರೆ.


ಕಾಯಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ. ಭಾಗ್ಯೇಶ್ ಕೆ. ರವರ ಮಾರ್ಗದರ್ಶನದಲ್ಲಿ ಡಾ. ವಿನಿತಾ ನಾಯರ್ ಕಾಯಚಿಕಿತ್ಸಾ ವಿಷಯದಲ್ಲಿ ಏಳನೇ ರ್‍ಯಾಂಕ್ ಪಡೆದಿರುತ್ತಾರೆ.


ವಿಭಾಗದ ಮುಖ್ಯಸ್ಥರುಗಳನ್ನು, ವಿಭಾಗದ ಪ್ರಾಧ್ಯಾಪಕರುಗಳನ್ನು ಹಾಗೂ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿಗಳಾದ ಅರ್ಕಿಟೆಕ್ಟ್ ಅಕ್ಷಯ್ ಕೆ.ಸಿ., ಉಪಾಧ್ಯಕ್ಷರಾದ ಶ್ರೀಮತಿ. ಶೋಭ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ. ಸಿ., ಶ್ರೀ ಕೆ. ವಿ., ಹೇಮನಾಥ, ಖಜಾಂಜಿ ಡಾ. ಗೌತಮ್ ಗೌಡ ಹಾಗೂ ಕೌಂನ್ಸಿಲ್ ಮೆಂಬರ್‍ಸ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಡಾ. ಲೀಲಾಧರ್ ಡಿ. ವಿ., ಅಭಿನಂದಿಸಿದ್ದಾರೆ.