ಕೆ.ವಿ.ಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದ ಎರಡು ಹೊಸ ಉತ್ಪನ್ನಗಳ ಬಿಡುಗಡೆ

0

ಕೆ.ವಿ.ಜಿ ಆಯುರ್ವೇದ ಕಾಲೇಜಿನಲ್ಲಿ ಫೆ.10 ರಂದು ಜರುಗಿದ “ಅನುಸಂಧಾನ-2024” ರೀಸರ್ಚ್ ಮೆಥೆಡೋಲೋಜಿ ಮತ್ತು ಬಯೋ-ಸ್ಟಾಟಸ್ಟಿಕ್ಸ್ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮದಲ್ಲಿ ಕೆ.ವಿ.ಜಿ ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದಲ್ಲಿ ತಯಾರಿಸಲಾದ ನೂತನ ಉತ್ಪನ್ನಗಳಾದ ಮಹಮಂಜಿಷ್ಟಾದಿ ಕಾಢ ಮತ್ತು ಮಹರಾಸ್ನಾದಿ ಕಾಢ ಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ. ಕೆ.ವಿ.ಚಿದಾನಂದ, ಮುಖ್ಯ ಅತಿಥಿಗಳಾದ, ಮೈಸೂರು ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕರಾದ ಡಾ. ಲಕ್ಷ್ಮೀನಾರಾಯಣ ಶೇಣೈ, ಬೆಂಗಳೂರು ಸರ್ಕಾರಿ ಆಯುರ್ವೇದ ಕಾಲೇಜಿನ ಸಂಹಿತ ಮತ್ತು ಸಿಧ್ಧಾಂತ ವಿಭಾಗದ ಉಪನ್ಯಾಸಕ ಹಾಗೂ ಮುಖ್ಯಸ್ಥರು ಡಾ. ಆನಂದ ಕಟ್ಟಿ, ಹಾಗೂ ಕರ್ನಾಟಕ ಆಯುರ್ವೇದ ಕಾಲೇಜು, ಮಂಗಳೂರು ಇಲ್ಲಿಯ ವೈದ್ಯಕೀಯ ನಿರ್ದೇಶಕ, ಸಿ ಸಿ ಎಸ್ ಸಿ ಎ ನೊಂದಾಯಿತ ಸದಸ್ಯ, ಡಾ. ಅಜಿತ್ ಕಾಮತ್ ಬಿಡುಗಡೆಗೊಳಿಸಿದರು.

ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ.ಲೀಲಾಧರ ಡಿ.ವಿ., ಕೆ.ವಿ.ಜಿ. ಆಯುರ್ವೇದ ಔಷಧ ತಯಾರಿಕಾ ಘಟಕ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಕಾರ್ಯ ನಿರ್ವಾಹಕರಾದ ಡಾ.ಪುರುಷೋತ್ತಮ ಕೆ.ಜಿ., ಕೆ.ವಿ.ಜಿ. ಆಯುರ್ವೇದ ಕಾಲೇಜಿನ ಶಾಲಾಖ್ಯ ತಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಉದಯಶಂಕರ ಎನ್. ಹಾಗೂ ವಿದ್ಯಾರ್ಥಿ ಕ್ಷೇಮ ಅಧಿಕಾರಿ ಡಾ. ಹರ್ಷಿತಾ ಎಂ. ಉಪಸ್ಥಿತರಿದ್ದರು.

ಮಹಾಮಂಜಿಷ್ಟಾದಿ ಕಾಢ ವೈಶಿಷ್ಟತೆ

ಇದು ರಕ್ತಶುದ್ಧಿ ಗೊಳಿಸುವ ಉತ್ಕೃಷ್ಟ ಶಾಸ್ತ್ರೀಯ ಆಯುರ್ವೇದ ಔಷಧಿ. ಈ ಔಷಧಿಯು ಮಂಜಿಷ್ಟ, ಮುಸ್ತ, ಶುಂಠಿ, ಕುಟಜ, ಅಮೃತಬಳ್ಳಿ, ಅರಶಿನ, ತ್ರಿಫಲ, ಭೃಂಗರಾಜ, ಸಾರೀವ ಮುಂತಾದ 44 ನೈಸರ್ಗಿಕ ಘಟಕ ದ್ರವ್ಯಗಳಿಂದ ಸಂಪನ್ನವಾಗಿದೆ.
ಕುಷ್ಠ ರೋಗ, ವಾತ ರಕ್ತ, ಅರ್ದಿತ, ಉಪದಂಶ, ಶ್ಲೀಪದ, ಪಕ್ಷಾಘಾತ ಹಾಗೂ ಮೇದೋವೃದ್ಧಿ ಗೆ ಉಪಾಯೋಗಕಾರಿ ಔಷಧಿ.

ಮಹಾರಾಸ್ನಾದಿ ಕಾಢ ವೈಶಿಷ್ಟತೆ

ಸರ್ವಾಂಗ ವಾತ, ಕಂಪವಾತ, ಪಾಕ್ಷಾಘಾತ, ಅವಬಾಹುಕ, ಗೃಧೃಸಿ, ಆಮವಾತ, ಶುಕ್ರ ದೋಷ, ಯೋನಿ ರೋಗ, ಬಂಜೆತನ, ಮೇದವೃದ್ಧಿ, ಗಂಟು ನೋವು ಮುಂತಾದ ಸಮಸ್ತ ವಾತ ರೋಗಗಳಿಗೆ ಪರಿಣಾಮಕಾರಿ ಆಯುರ್ವೇದ ಔಷಧಿ.
ಈ ಔಷಧಿಯು ರಾಸ್ನಾ, ಕಳಂಗಡಲೆಯ ಬೇರು, ದೇವದಾರು, ಶುಂಠಿ, ಹರಳು ಬೇರು, ಅಮೃತಬಳ್ಳಿ, ಅಶ್ವಗಂಧ, ಶತಾವರಿ ಮುಂತಾದ 26 ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟ ಉತ್ಕೃಷ್ಟ ಶಾಸ್ತ್ರೀಯ ಆಯುರ್ವೇದ ಔಷಧಿ.