ಕಳಂಜ‌: ಪುಷ್ಪಾ ಬೆವರೇಜಸ್ ಬಾಜೆಲ್ ತಂಪು ಪಾನೀಯ ಘಟಕ ಶುಭಾರಂಭ

0

ಕಳಂಜ ಗ್ರಾಮದ ನಾಲ್ಗುತ್ತುವಿನಲ್ಲಿ ಭರತ್ ಕುಮಾರ್ ರೈ ಮಾಲಕತ್ವದ ಪುಷ್ಪಾ ಬೇವರೇಜಸ್ ತಂಪು ಪಾನೀಯ ಘಟಕ ಫೆ. 18 ರಂದು ಶುಭಾರಂಭಗೊಂಡಿತು. ಸುಭಾಶ್ಚಂದ್ರ ರೈ ತೋಟ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಳಂಜ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಕರುಣಾಕರ ಶೆಟ್ಟಿ ನಾಲ್ಗುತ್ತು, ವಿಶ್ವನಾಥ ರೈ ಕೆ, ಶಿವಪ್ರಸಾದ್ ಕಳಂಜ, ಸುಧೀರ್ ಕಳಂಜ ಮತ್ತು ಅವರ ಮನೆಯವರು ಉಪಸ್ಥಿತರಿದ್ದು ಶುಭಹಾರೈಸಿದರು.
ಇಲ್ಲಿ ಮನಸ್ಸಿಗೆ ಹಾಗೂ ದೇಹಕ್ಕೆ ಉಲ್ಲಾಸ ನೀಡುವ ಆರೋಗ್ಯಕರವಾದ ತಂಪು ಪಾನೀಯಗಳು ವಿವಿಧ ಪ್ಲೇವರ್ ಗಳಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.