ಸುಬ್ರಹ್ಮಣ್ಯ ದ ಇತಿಹಾಸದ ಮಹತ್ವವನ್ನು ತಿಳಿಸುವ ವಸ್ತು ಸಂಗ್ರಹಾಲಯ ಇದಾಗಲಿ:ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳು
ಕುಕ್ಕೆ ಸುಬ್ರಹ್ಮಣ್ಯ ಪೌರಾಣಿಕ ಹಿನ್ನೆಲೆಯುಳ್ಳ ಇರುವ ಐತಿಹಾಸಿಕ ಕ್ಷೇತ್ರ ಪ್ರತಿನಿತ್ಯ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಬಂದು ಹೋಗುತ್ತಾರೆ ಅಂತ ಭಕ್ತರಲ್ಲಿ ಸುಬ್ರಹ್ಮಣ್ಯದ ಇತಿಹಾಸವನ್ನು ಮಹತ್ವವನ್ನು ತಿಳಿಯಬೇಕೆಂಬ ಹಂಬಲ ಉಳ್ಳವರಾಗಿರುತ್ತಾರೆ ಇಲ್ಲಿನ ಇತಿಹಾಸವನ್ನು ತಿಳಿಸಲು ಹಾಗೂ ಈ ಕ್ಷೇತ್ರದ ಮಹತ್ವದ ಬಗ್ಗೆ ಶಿಕ್ಷಣ ಹಾಗೂ ಮಾಹಿತಿ ನೀಡುವ ಸಲುವಾಗಿ ಇಂದು ಇಲ್ಲಿ ಈ ವಸ್ತು ಸಂಗ್ರಹಾಲಯ ಹಾಗೂ ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಕೇಂದ್ರ ಮತ್ತು ಸಂಶೋಧನಾ ಕೇಂದ್ರ ಲೋಕಾರ್ಪಣೆಯಾಗಿದೆ ಎಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳು ನುಡಿದರು.
ಅವರು ಫೆ.25 ರಂದು ಸುಬ್ರಹ್ಮಣ್ಯದ ವನದುರ್ಗ ದೇವಿ ದೇವಸ್ಥಾನದ ಸಮೀಪದ ಅಭಯ ಮಹಾಗಣಪತಿ ದೇವಸ್ಥಾನದ ಕೆಳ ಅಂತಸ್ತಿನಲ್ಲಿ ಶ್ರೀನಿಕೇತನ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸಿ ಮಾತನಾಡಿದರು . ಸಮಾರಂಭದ ಅಧ್ಯಕ್ಷತೆಯನ್ನು ನ್ಯಾಕ್ ನ ಮಾಜಿ ನಿರ್ದೇಶಕರಾದ ಪ್ರೊ.ಎಸ್ ಪಿ ಶರ್ಮ ವಹಿಸಿದ್ದರು. ವಸ್ತು ಸಂಗ್ರಹಾಲಯದ ಉದ್ಘಾಟನೆಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾl ಎಸ್ ಅಹಲ್ಯ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಧಾರವಾಡ ಬನಶಂಕರಿ ಜೆಎಸ್ಎಸ್ ಕಾಲೇಜಿನ ಇತಿಹಾಸ ವಿಭಾಗದ ಡಾlಎಚ್ ವಿಷ್ಣುವರ್ಧನ್, ಸುಬ್ರಹ್ಮಣ್ಯ ಮಠದ ದಿವಾನರಾದ ಶ್ರೀ ಸುದರ್ಶನ ಜೋಯಿಸ್ ,ಸುಬ್ರಹ್ಮಣ್ಯದ ಇತಿಹಾಸ ತಜ್ಞರಾದ ಡಾl ಕೆ ಎಸ್ ಎನ್ ಉಡುಪ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಶ್ರೀನಿಕೇತನ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರದ ಸಂಸ್ಥಾಪಕ ನಿರ್ದೇಶಕರಾದ ಡಾl ಜಿ .ವಿ .ಕಲ್ಲಾಪುರ ಸ್ವಾಗತಿಸಿದರು. ಬಿಳಿನೆಲೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸತ್ಯಶಂಕರ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ನಿವೃತ್ತ ಪ್ರಾಚಾರ್ಯ ವೆಂಕಟೇಶ್ ಮಂಜುಳಗಿರಿ ವಂದಿಸಿದರು.