ಕೊಲ್ಲಮೊಗ್ರದ ಮೀನಾಕ್ಷಿ ಹಾಗೂ ವನಿತಾರಿಗೆ ದೆಹಲಿಯ ವಿಮಾನವೇರುವ ಭಾಗ್ಯ
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಯೋಜನೆ ಇದಾಗಿದ್ದು, ‘ಸಂಜೀವಿನೀ’- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಮಾರ್ಗದರ್ಶನದಲ್ಲಿ ಅನುಷ್ಠಾನಗೊಳ್ಳಲಿದೆ. ಮಾ.! ರಂದು ರಾಷ್ಟ್ರಪತಿಗಳ ಭೇಟಿ ಹಾಗೂ ಅಮೃತ್ ಉದ್ಯಾನವನಕ್ಕೆ ಭೇಟಿ ನೀಡಲು ಇವರಿಗೆ ಅವಕಾಶ ದೊರೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ನಾಲ್ವರು ಕೊರಗ ಸಮುದಾಯದ ಮಹಿಳೆಯರು ಸೇರಿದಂತೆ ಕರ್ನಾಟಕದಿಂದ ಒಟ್ಟು ೩೫ ಮಂದಿ ದೆಹಲಿಗೆ ತೆರಳಲಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಮೀನಾಕ್ಷಿ ಹಾಗೂ ವನಿತಾ ರಾಷ್ಟ್ರಪತಿ ಭೇಟಿ ಮಾಡಲಿರುವರು.
ಮೀನಾಕ್ಷಿ ಕೊಲ್ಲಮೊಗ್ರು ಆದಿಲಕ್ಷ್ಮೀ ಸಂಜೀವಿನೀ ಸ್ವಸಹಾಯ ಗುಂಪಿನ ಸದಸ್ಯೆಯಾಗಿದ್ದು, ಕೀರ್ತಿ ಸಂಜೀವಿನೀ ಒಕ್ಕೂಟದ ಸದಸ್ಯರಾಗಿದ್ದಾರೆ. ಕೃಷಿ ಸಖಿಯು ಆಗಿರುವ ಇವರು ಬಳ್ಳಿಯಿಂದ ಬುಟ್ಟಿ ಸಹಿತ ಇನ್ನಿತ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಇವರು ಪಳಗಿದವರು. ದೆಹಲಿಗೆ ಹೋಗುತ್ತೇನೆ, ರಾಷ್ಟ್ರಪತಿಗಳನ್ನು ಭೇಟಿಯಾಗುತ್ತೇನೆ ಎನ್ನುವುದೇ ನನಗೆ ತುಂಬಾ ಖುಷಿ ತಂದಿದೆ ಎಂದಿದ್ದಾರೆ.
ವನಿತಾ ಕೊಲ್ಲಮೊಗ್ರು ಗ್ರಾಮದ ವನಿತಾ ಸ್ವಸಹಾಯಯ ಗುಂಪಿನ ಸದಸ್ಯೆಯಾಗಿರುವ ಇವರು ಬಡತನದ ಹಿನ್ನೆಲೆಯಲ್ಲಿ ಬೆಳೆದವರು. ಬಳ್ಳಿಯಿಂದ ಬುಟ್ಟಿ ಸಹಿತ ಅನೇಕ ಕರಕುಶಲವಸ್ತುಗಳನ್ನು ತಯಾರಿಸುವುದರಲ್ಲಿ ಇವರದು ಎತ್ತಿದಕೈ.ದೆಹಲಿಗೆ ವಿಮಾನದಲ್ಲಿ ಹೋಗುವುದೇ ನಮಗೆ ದೊಡ್ಡ ಸಂಭ್ರಮ. ರಾಷ್ಟ್ರಪತಿಗಳನ್ನು ಭೇಟಿಯಾಗುವುದು ಮತ್ತಷ್ಟು ಖುಷಿಯ ವಿಚಾರ ಎಂದಿದ್ದಾರೆ.