ಮೇಲಿನ ಮುಕ್ಕೂರು : ತರವಾಡು ಕ್ಷೇತ್ರದ ಸಾನಿಧ್ಯ ಅಭಿವೃದ್ಧಿ ಹಿನ್ನೆಲೆ

0

ನಾಲ್ಕು ದಿನಗಳ ಅಷ್ಟಮಂಗಲ ಪ್ರಶ್ನಾ ಚಿಂತನೆ ಪ್ರಾರಂಭ

ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ-ದೈವ ಶಕ್ತಿ ಸಾನಿಧ್ಯದ ನೆಲೆ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದಲ್ಲಿ ದೈವ ಸಾನಿಧ್ಯಗಳ ಜೀರ್ಣೋದ್ಧಾರ ಕುರಿತಂತೆ ಅಷ್ಟಮಂಗಲ ಪ್ರಶ್ನಾ ಚಿಂತನೆ ಫೆ.26 ರಂದು ಪ್ರಾರಂಭಗೊಂಡಿತು.

ದೈವಜ್ಞ ಗಣೇಶ್ ಭಟ್ ಮುಳಿಯ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ ಪ್ರಾರಂಭಗೊಂಡು ಮೊದಲಾಗಿ ಸ್ವರ್ಣ ಪ್ರಶ್ನೆ ನಡೆದು ಸ್ವರ್ಣಾರೂಢರಾಶಿ ಪ್ರಕಾರ ಮುಂದಿನ ಪ್ರಕ್ರಿಯೆಗಳು ಸಂಜೆ ತನಕ ನಡೆಯಿತು. ಮಂಗಳವಾರವೂ ಪ್ರಶ್ನಾಚಿಂತನೆ ಮುಂದುವರಿಯಲಿದೆ.

ಈ ಸಂದರ್ಭದಲ್ಲಿ ಮೇಲಿನ ಮುಕ್ಕೂರು ತರವಾಡು ಕ್ಷೇತ್ರದ ಪ್ರಮುಖರಾದ ಎಂ.ಕೆ.ಬಾಲಚಂದ್ರ ರಾವ್ ಕೊಂಡೆಪ್ಪಾಡಿ, ಉಮೇಶ್ ರಾವ್ ಕೊಂಡೆಪ್ಪಾಡಿ, ಶ್ರೀಧರ ಬೈಪಡಿತ್ತಾಯ, ಮೋಹನ ಬೈಪಡಿತ್ತಾಯ, ವಸಂತ ಬೈಪಡಿತ್ತಾಯ, ಲಕ್ಷ್ಮೀಶ ಬೈಪಡಿತ್ತಾಯ, ರಾಘವೇಂದ್ರ ಬೈಪಡಿತ್ತಾಯ, ಸುಧೀರ್ ಕೊಂಡೆಪ್ಪಾಡಿ, ಊರ ಪ್ರಮುಖರಾದ ನರಸಿಂಹ ತೇಜಸ್ವಿ ಕಾನಾವು, ರಾಮಚಂದ್ರ ಕೋಡಿಬೈಲು, ಉಮೇಶ್ ಕೆಎಂಬಿ, ಕುಶಾಲಪ್ಪ ಪೆರುವಾಜೆ ಸಹಿತ ಊರವರು ಉಪಸ್ಥಿತರಿದ್ದರು.