ಉಬರಡ್ಕ ಮಿತ್ತೂರು; ಜೇನು ಸಾಕಾಣಿಕ ತರಬೇತಿ

0

ಭಾ. ಕೃ. ಅ. ಪ. ಕೃಷಿ ವಿಜ್ಞಾನ ಕೇಂದ್ರ (ದಕ್ಷಿಣ ಕನ್ನಡ) ಮಂಗಳೂರು ಹಾಗೂ ಭಾ. ಕೃ. ಅ. ಪ.- ರಾಷ್ಟೀಯ ಕೃಷಿ ಸಂಶೋಧನಾ ನಿರ್ವಹಣಾ ಅಕಾಡೆಮಿ ಹೈದರಾಬಾದ್ ಇವರುಗಳ ಸಹಯೋಗದಲ್ಲಿ ಪರಿಶಿಷ್ಟ ಜಾತಿ ರೈತರಿಗೆ ವೈಜ್ಞಾನಿಕ ಜೇನು ಸಾಕಾಣಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಮತ್ತು ಕ್ಷೇತ್ರ ಬೇಟಿ ಕಾರ್ಯಕ್ರಮವನ್ನು ಉಬರಡ್ಕ ಗ್ರಾಮದ ಪ್ರಗತಿಪರ ಜೇನು ಕೃಷಿಕರಾದ ಪುಟ್ಟಣ್ಣ ಗೌಡರ ತೋಟದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ದ.ಕ.ಗ್ರಾಮ ಪಂಚಾಯತ್ ಮಹಾ ಒಕ್ಕೂಟ ದ ಅಧ್ಯಕ್ಷ ಹರೀಶ್ ಉಬರಡ್ಕ ಭಾಗವಹಿಸಿ ರೈತರು ತಮ್ಮ ಸುಸ್ಥಿರ ಅಭಿವೃದ್ದಿಗಾಗಿ ಜೇನು ಕೃಷಿಯಂತಹ ಉಪಕಸುಬುಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು. ಪುಟ್ಟಣ್ಣ ಗೌಡ ರವರು ಜೇನು ಕೃಷಿಯಲ್ಲಿ ತಮ್ಮ ಅನುಭವ ಮತ್ತು ಶಿಬಿರಾರ್ಥಿಗಳಿಗೆ ಜೇನು ಕೃಷಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಡಾ. ತೇಜಸ್ವಿ ಕುಮಾರ, ಸಹಾಯಕ ಪ್ರಾಧ್ಯಾಪಕರು ಕೃಷಿ ಅರ್ಥಶಾಸ್ತ್ರ ರವರು ಮಾರುಕಟ್ಟೆ ವ್ಯವಸ್ಥೆ ಕುರಿತು ಮಾಹಿತಿಯನ್ನು ನೀಡಿದರು. ಡಾ. ಕೇದಾರನಾಥ, ವಿಜ್ಞಾನಿಗಳು (ಸಸ್ಯ ಸಂರಕ್ಷಣೆ) ಕೆವಿಕೆ ಮಂಗಳೂರು ಇವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಈ ಕಾರ್ಯಕ್ರಮದಲ್ಲಿ ಸಂದೀಪ, ಗಿರಿದಾಸ ಹಾಗೂ 25 ಕೃಷಿಕರು ಭಾಗವಹಿಸಿದರು.