ಪೆರಾಜೆ ಶ್ರೀ ಶಾಸ್ತಾವು ದೇವಾಲಯದ ಗೋಪುರ ಹುಲಿಚಾವಡಿ ಮತ್ತು ಪಡಿಪ್ಪಿರೆ ನಿರ್ಮಾಣಕ್ಕೆ ಮನವಿ ಪತ್ರ ಬಿಡುಗಡೆ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಲ್ಲಿ ಅಷ್ಟಮಂಗಲದಲ್ಲಿ ಕಂಡುಕೊಂಡಂತೆ ಗ್ರಾಮಸ್ಥರಿಂದ ನವೀಕರಣಗೊಳಿಸಲು ಪ್ರಸ್ತಾಪಿಸಲ್ಪಟ್ಟ ಗೋಪುರ, ಹುಲಿಚಾವಡಿ, ಪಡಿಪ್ಪಿರೆ, ನಿರ್ಮಾಣದ ಮನವಿ ಪತ್ರವನ್ನು ದೇವಾಲಯದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.

ಶ್ರೀ ಶಾಸ್ತಾವು ಕ್ಷೇತ್ರದಲ್ಲಿ ಶ್ರೀ ಕೋಮಾಳಿ, ಕರಿಭೂತ ಗುಡಿ, ಸಹಿತ ಸಂಪೂರ್ಣ ದೇವಸ್ಥಾನವನ್ನು ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಹಕಾರದಿಂದ ನವೀಕರಣಗೊಳಿಸಲಾಗಿದ್ದು, ಕ್ಷೇತ್ರದ ತಂತ್ರಿಯವರಾದ ವೇ.ಮೂ. ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಅವರ ಅನುಮತಿ ಪಡೆದು ಅವರ ಮಾರ್ಗದರ್ಶನದಲ್ಲಿ ವಾಸ್ತುಶಿಲ್ಪಿ ರಮೇಶ್ ಕಾರಂತ ಅವರ ನೀಲನಕ್ಷೆಯಂತೆ ಮುಂದಿನ ಜಾತ್ರೆಯ ಬಳಿಕ ಒಂದು ವರ್ಷದೊಳಗೆ ನಿರ್ಮಿಸಿ, ಮುಗಿಸಬೇಕೆಂದು ತೀರ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ ಅಮಚೂರು, ಆಡಳಿತ ಸಹಕಾರ್ಯದರ್ಶಿ ಚಿನ್ನಪ್ಪ ಅಡ್ಕ, ದೇವತಕ್ಕರು ಮತ್ತು ತಕ್ಕಮುಖ್ಯಸ್ಥ ರಾಮಕಜೆ ರಾಜಗೋಪಾಲ ಸೇರಿದಂತೆ ಪದಾಧಿಕಾರಿಗಳು ಹಾಗೂ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.