ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಮತ್ತು ವಿದ್ಯಾಮಾತಾ ಅಕಾಡೆಮಿ ಇದರ ಸಹಭಾಗಿತ್ವದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ಇವರು ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಲೇಜಿನ ಶೈಕ್ಷಣಿಕ ಸಲಹಾಗಾರರಾದ ಪ್ರೊ. ಎಂ ಬಾಲಚಂದ್ರ ಗೌಡ ಇವರು ಕಾರ್‍ಯಕ್ರಮವನ್ನು ಉದ್ಘಾಟಿಸಿದರು. ಕಾರ್‍ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅರವಿಂದ ಚೊಕ್ಕಾಡಿ ಗೌರವ ತರಬೇತುದಾರರು ವಿದ್ಯಾಮಾತಾ ಅಕಾಡೆಮಿ, ಸುಳ್ಯ ಮತ್ತು ಭಾಗ್ಯೇಶ್ ರೈ ಆಡಳಿತ ನಿರ್ದೇಶಕರು ವಿದ್ಯಾಮಾತಾ ಅಕಾಡೆಮಿ, ಸುಳ್ಯ ಇವರು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ವಿದ್ಯಾಮಾತಾ ಆಕಾಡೆಮಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ. ಚಂದ್ರಾವತಿ ಬಡ್ಡಡ್ಕ ಕಾರ್‍ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀಮತಿ ರತ್ನಾವತಿ ಡಿ ಕಾರ್‍ಯಕ್ರಮಕ್ಕೆ ಶುಭಾಶಯಗಳನ್ನು ನುಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಮಮತ ಕೆ ಕಾರ್‍ಯಕ್ರಮಕ್ಕೆ ವಂದನಾರ್ಪಣೆಗೈದರು. ಕು. ರತ್ನಸಿಂಚನ ಅಂತಿಮ ಬಿ.ಕಾಂ ಪ್ರಾರ್ಥಿಸಿದಳು. ಶ್ರೀಮತಿ ಭವ್ಯ.ಪಿ.ಎಂ ಇಂಗ್ಲೀಷ್ ವಿಭಾಗದ ಮುಖ್ಯಸ್ಥರು ಕಾರ್‍ಯಕ್ರಮವನ್ನು ಆಯೋಜಿಸಿದರು. ಕು. ಅನ್ವಯ ದ್ವಿತೀಯ ಬಿ.ಕಾಂ ಕಾರ್‍ಯಕ್ರಮವನ್ನು ನಿರೂಪಿಸಿದರು.