ಸುಳ್ಯ ಅಗ್ನಿಶಾಮಕ ಇಲಾಖೆಯ ಹರೀಶ್ಚಂದ್ರ ಆರ್ತಾಜೆ, ಸುಧೀರ್ ಕಿಂಡಲ್ಕರ್‌ರಿಗೆ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ವರ್ಗಾವಣೆ

0

ಸುಳ್ಯ ಅಗ್ನಿಶಾಮಕ ಇಲಾಖೆಯಲ್ಲಿ ಹಿರಿಯ ಅಗ್ನಿಶಾಮಕರಾಗಿದ್ದ ಸುಳ್ಯ ಆರ್ತಾಜೆಯ ಹರೀಶ್ಚಂದ್ರ ಹಾಗೂ ಕಾರವಾರದ ಸುಧೀರ್ ಕಿಂಡಲ್ಕರ್‌ರಿಗೆ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಯಾಗಿದ್ದು ಅವರು ಸುಳ್ಯದಿಂದ ವರ್ಗಾವಣೆಯಾಗಿದ್ದಾರೆ.

ಹರೀಶ್ಚಂದ್ರ ಆರ್ತಾಜೆ : ೧೯೯೪ರಲ್ಲಿ ಬಿಜಾಪುರದ ಇಂಡಿ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕರಾಗಿ ಸೇವೆ ಆರಂಭಿಸಿದ ಇವರು, ಬಳಿಕ ಮೈಸೂರಿನ ಹುಣಸೂರು ಅಗ್ನಿಶಾಮಕ ಠಾಣೆಗೆ ವರ್ಗಾವಣೆಯಾದರು. ಅಲ್ಲಿಂದ ಮಂಗಳೂರಿನ ಕದ್ರಿ ಅಗ್ನಿಶಾಮಕ ಠಾಣೆಗೆ ವರ್ಗಾವಣೆಗೊಂಡ ಇವರಿಗೆ ೨೦೧೧ರಲ್ಲಿ ಹಿರಿಯ ಅಗ್ನಿಶಾಮಕರಾಗಿ ಪದೋನ್ನತಿಗೊಂಡು ಅಲ್ಲೇ ಮುಂದುವರಿದರು. ೨೦೧೬ರಲ್ಲಿ ಸುಳ್ಯಕ್ಕೆ ವರ್ಗಾವಣೆಗೊಂಡು ಬಂದರು. ಇದೀಗ ಪದೋನ್ನತಿಗೊಂಡಿದ್ದು ಅವರು ಮಂಗಳೂರಿನ ಪಾಂಡೇಶ್ವರಕ್ಕೆ ವರ್ಗಾವಣೆಗೊಂಡಿದ್ದಾರೆ.


ಸುಳ್ಯ ಸಮೀಪದ ಪೈಚಾರು ಆರ್ತಾಜೆ ನಿವಾಸಿಯಾಗಿರುವ ಹರೀಶ್ಚಂದ್ರರ ಪತ್ನಿ ಶ್ರೀಮತಿ ರಂಜಿನಿ ಬಿ.ಹೆಚ್. ಗೃಹಿಣಿಯಾಗಿದ್ದಾರೆ. ಮಗಳು ಇಂಚರ (ಕಾವ್ಯ) ಬಿ.ಹೆಚ್. ವಿವಾಹವಾಗಿದೆ.
ಸುಧೀರ್ ಕಿಂಡಲ್ಕರ್ : ಕಾರವಾರದ ಕೂಡೂರಿನವರಾದ ಸುಧೀರ್ ಕಿಂಡಲ್ಕರ್‌ರಿಗೆ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಪದೋನ್ನತಿಯಾಗಿದ್ದು ಅವರು ಯಲ್ಲಾಪುರ ಅಗ್ನಿಶಾಮಕ ಠಾಣೆಗೆ ವರ್ಗಾವಣೆಯಾಗಿದ್ದಾರೆ. ೧೯೯೬ರಲ್ಲಿ ಪುತ್ತೂರಿನ ಅಗ್ನಿ ಶಾಮಕ ಇಲಾಖೆಯಲ್ಲಿ ಅಗ್ನಿಶಾಮಕರಾಗಿ ಸೇವೆ ಆರಂಭಿಸಿದ ಇವರು, ಬಳಿಕ ೨೦೧೫ರಲ್ಲಿ ಸುಳ್ಯಕ್ಕೆ ವರ್ಗಾವಣೆಗೊಂಡರು. ಇದೀಗ ಅವರು ಪದೋನ್ನತಿಗೊಂಡು ವರ್ಗಾವಣೆಯಾಗಿದ್ದಾರೆ. ಇವರ ಪತ್ನಿ ಶ್ರೀಮತಿ ಸೀತಾ ಕಿಂಡಲ್ಕರ್ ಗೃಹಿಣಿ, ಪುತ್ರ ಶರಣ್ ಇಂಜಿನಿಯರ್ ಪದವಿ ಪೂರೈಸಿದ್ದಾರೆ.