ಐವರ್ನಾಡು ಗ್ರಾಮದ ಕೊಯಿಲ ಶ್ರೀ ಮಹಾಮ್ಮಾಯಿ ದೈವಸ್ಥಾನದಲ್ಲಿ ವಾರ್ಷಿಕ ಮಹಾಪೂಜೆ ಕಾರ್ಯಕ್ರಮವು ಮಾ.03 ರಂದು ಭಕ್ತಿ,ಸಂಭ್ರಮದಿಂದ ನಡೆಯಿತು.
ಫೆ.24 ರಂದು ಗೊನೆ ಕಡಿಯಲಾಯಿತು.ಮಾ.01 ರಂದು ಕಲಶ ಸ್ನಾನ ,ಭಂಡಾರ ಶುದ್ಧೀಕರಣ ನಡೆಯಿತು.
ಮಾ.02 ರಂದು ರಾತ್ರಿ ಹರಕೆ ಒಪ್ಪಿಸಲಾಯಿತು.
ಬಳಿಕ ಪೂಜಾ ಸ್ಥಳ ಶುದ್ಧೀಕರಣ ,ಪೂಜಾ ಸ್ಥಳಕ್ಕೆ ಭಂಡಾರ ಹೊರಟು ಅಮ್ಮನವರಿಗೆ ಪೂಜಾ ಗುಂಡ ಒಪ್ಪಿಸಲಾಯಿತು. ನಂತರ ರಾತ್ರಿ ದೇವದೂತರಿಗೆ ಬಲಿಕೊಡುವುದು ನಡೆಯಿತು.ಮಾ.03 ರಂದು ಮಧ್ಯಾಹ್ನ ಶ್ರೀ ಮಹಾಮ್ಮಾಯಿ ಅಮ್ಮನವರ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕೊಯಿಲ ಶ್ರೀ ಮಹಾಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗು ಕೊಯಿಲ ಹತ್ತು ಸಮಸ್ತರು, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.