ಕಡಬದಲ್ಲಿ ಮಾ. 4 ರಂದು ವಿದ್ಯಾರ್ಥಿನಿಯರ ಮೇಲಿನ ಆಸಿಡ್ ದಾಳಿಯನ್ನು ಖಂಡಿಸಿ ವಿದ್ಯಾರ್ಥಿನಿಯರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಮತ್ತು ವಿದ್ಯಾರ್ಥಿನಿಯರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕೆಂದು ತಹಶೀಲ್ದಾರ್ ರವರ ಮೂಲಕ ಮನವಿ ಮಾಡಲಾಯಿತು ಮತ್ತು ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕಡಬ ಠಾಣಾಧಿಕಾರಿಯವರಿಗೆ ಬಿಜೆಪಿ ಯುವಮೋರ್ಚಾ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ಕು. ಭಾಗೀರಥಿ ಮುರುಳ್ಯ,ಯುವಮೋರ್ಚಾ ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ, ಯುವಮೋರ್ಚಾ ಪೂರ್ವಾಧ್ಯಕ್ಷರಾದ ಶ್ರೀಕೃಷ್ಣ ಎಂ ಆರ್ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ, ಹರ್ಷಿತ್ ಪೆರುವಾಜೆ, ಮನುದೇವ್ ಪರಮಲೆ, ದುರ್ಗೆಶ್ ಪಾರೆಪ್ಪಾಡಿ ,ನಾಗರಾಜ್ ಬಡ್ಡಡ್ಕ ಮತ್ತು ಕಡಬದ ಬಿ ಜೆ ಪಿ ಮುಖಂಡರು ಉಪಸ್ಥಿತರಿದ್ದರು.