ಕಲ್ಮಡ್ಕ ಗ್ರಾಮ ಪಂಚಾಯತ್ ಪ್ರಥಮ ಹಂತದ ಗ್ರಾಮ ಸಭೆಗ್ರಾಮದಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಸುದೀರ್ಘ ಚರ್ಚೆ

0

ಕಲ್ಮಡ್ಕ ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮ ಸಭೆ ಮಾ.5 ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾ‌ ಮಂದಿರದಲ್ಲಿ ಜರುಗಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕೆ ಎಸ್ ಸಭಾಧ್ಯಕ್ಷತೆ ವಹಿಸಿದ್ದರು.

ನೋಡಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ (ಗ್ರೇಡ್ 2)
ಶ್ರೀಮತಿ ಉಮಾದೇವಿ ಪಾಲ್ಗೊಂಡಿದ್ದರು.

ಪಂಬೆತ್ತಾಡಿಯಲ್ಲಿ ನಡೆದ ತಹಶೀಲ್ದಾರ್ ಗ್ರಾಮ ವಾಸ್ತವ್ಯದಲ್ಲಿ ಪಂಬೆತ್ತಾಡಿ ಕಾಂತುಕುಮೇರಿ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ.ಮಂಜೂರು ಆಗಿ ಟೆಂಡರ್ ಆಗಿದೆ ಎಂದು ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು. ಆದರೆ ಈ ವರೆಗೆ ಕಾಮಗಾರಿ ಆಗಿಲ್ಲ ಈ ಕುರಿತು ಗ್ರಾಮಸ್ಥರಿಂದ ಜಿ.ಪಂ.ಇಂಜಿನಿಯರ್ ರೊಂದಿಗೆ ಸುದೀರ್ಘ ಚರ್ಚೆ ನಡೆಯಿತು.


ಕರಿಕ್ಕಳ -ಪಂಬೆತ್ತಾಡಿ ರಸ್ತೆ ಅಭಿವೃದ್ಧಿ, ಸೇತುವೆಗಳ ಅಭಿವೃದ್ಧಿ, ಕಳಪೆ ಗೊಂಡ ಕಾಂಕ್ರೀಟ್ ರಸ್ತೆ ಸರಿಪಡಿಸಿ,ನೋಡೆಲ್ ಅಧಿಕಾರಿ ಮತ್ತು ಎಲ್ಲಾ ಅಧಿಕಾರಿಗಳು ಗ್ರಾಮ ಸಭೆಗೆ ಸಮಯಕ್ಕೆ ಸರಿಯಾಗಿ ಬರ ಬೇಕು, ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರ ಬೇಕು,
ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸ ಬೇಕು, ಪಂಬೆತ್ತಾಡಿ-ಕಲ್ಮಡ್ಕ ಗ್ರಾಮಗಳ ಕೆಲವು ಕಡೆ ವಿದ್ಯುತ್ ಲೈನ್ ಗಳನ್ನು ದುರಸ್ಥಿ , ಮರ ಕಳ್ಳ ಸಾಗಟ ತಡೆಯ ಬೇಕು, ಚುನಾವಣಾ ಸಂದರ್ಭ ಕೋವಿ ಡೆಪಾಸಿಟ್ ಇಡುವುದು ಬೇಡ, ಕಳ್ಳತನ ಪ್ರಕರಣ ತಡೆಯಲು ಪೊಲೀಸ್ ಇಲಾಖೆ ಸಿ ಸಿ ಟಿವಿ ಆಳವಡಿಸ ಬೇಕು, ಸ್ವಚ್ಛತೆ ಹೆಸರಲ್ಲಿ ವಿದ್ಯಾರ್ಥಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಸ ಹೆಕ್ಕಿಸುವುದು ಸರಿಯಲ್ಲ , ಕಲ್ಮಡ್ಕ ಮತ್ತು ಪಂಬೆತ್ತಾಡಿ ಗ್ರಾಮಕ್ಕೆ ಕಡಿಮೆ ಬೆಳೆ ವಿಮೆ ಬಿಡುಗಡೆಯಾಗಿದ್ದು ಬೆಳೆ ವೈಜ್ಞಾನಿಕ ಸಮೀಕ್ಷೆ ಮಾಡ ಬೇಕು, ಜಾಗಗಳ ರೆಕಾರ್ಡ್ ಮಾಡಲು ಅರಣ್ಯ ಇಲಾಖೆಯ ಯನ್ ಒ ಸಿ ಪಡೆಯಲು ಸಮಸ್ಯೆಯಾಗುತ್ತಿದೆ ಇದನ್ನು ಸರಿ ಪಡಿಸಬೇಕು, ಮಂಗಗಳ ಹಾವಳಿ ತಡೆಗಟ್ಟಿ, ರೈತ ಸಂಪರ್ಕ ಕೇಂದ್ರಲ್ಲಿರುವ ಸೌಲಭ್ಯಗಳನ್ನು ಗ್ರಾಮ ಪಂಚಾಯತ್ ತಿಳಿಸ ಬೇಕು, ರೈತ ಸಂಪರ್ಕ ಕೇಂದ್ರಲ್ಲಿರುವ ಸೌಲಭ್ಯಗಳಿಗೆ ಹಣ ಪಡೆಯುವುದು ಸರಿಯಲ್ಲ, ಬಾಬ್ಲುಬೆಟ್ಟು ಶಾಲೆ ಮುಚ್ಚಿ ಅನೇಕ ವರ್ಷ ಕಳೆದಿದೆ ಜಾಗವನ್ನು ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿ ಹೀಗೆ ಅನೇಕ ಚರ್ಚೆಗಳು ನಡೆದು ನಿರ್ಣಾಯಿಸಲಾಯಿತು.

ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ,
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿ ಪ್ರಸಾದ್ ಸಿ ಎಂ, ಗ್ರಾಮ ಪಂಚಾಯತ್ ಸದಸ್ಯರಾದ ಹಾಜಿರಾ ಗಫೂರ್, ಲೋಕೇಶ್ ಆಕ್ರಿಕಟ್ಟೆ, ಹರೀಶ ಯಂ, ಲೋಕಯ್ಯ ನಾಯ್ಕ ಬೊಳಿಯುರು, ಶ್ರೀಮತಿ ಪವಿತ್ರ ಕುದ್ವ , ಶ್ರೀಮತಿ ಮೀನಾಕ್ಷಿ ಕೆ, ಶ್ರೀಮತಿ ಜಯಲತ ಕೆ.ಡಿ. , ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು ಇಲಾಖಾ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿ ಪ್ರಸಾದ್ ಸಿ ಎಂ ಸ್ವಾಗತಿಸಿದರು, ವರದಿ ವಾಚಿಸಿದರು. ಸಿಬ್ಬಂದಿ ಶೇಷಪ್ಪ ವಾರ್ಡ್ ಸಭೆಯ ವರದಿ ವಾಚಿಸಿದರು.ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕೆ ಎಸ್ ವಂದಿಸಿದರು.