ಮಾ.8: ಸುಳ್ಯ ಸತ್ಸಂಗ ಕೇಂದ್ರದ ವತಿಯಿಂದ ಮಾಹಾ ಶಿವರಾತ್ರಿ ಉತ್ಸವ

0

ಸುಳ್ಯ ಸತ್ಸಂಗ ಕೇಂದ್ರದ ಆಶ್ರಯದಲ್ಲಿ ರವಿಶಂಕರ ಗುರೂಜಿಯವರ ಆಶೀರ್ವಾದದೊಂದಿಗೆ
ವರ್ಷಂಪ್ರತಿ ಜರುಗುವ
25 ನೇ ವರ್ಷದ ಮಹಾ ಶಿವರಾತ್ರಿ ಉತ್ಸವದ ಪ್ರಯುಕ್ತ ರುದ್ರಾಭಿಷೇಕ ಹಾಗೂ ಮಹಾ ಸತ್ಸಂಗ ಕಾರ್ಯಕ್ರಮವು ಮಾ.8 ರಂದು ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆಯಲಿರುವುದು.
ಸಂಜೆ ಗಂಟೆ 6.00 ರಿಂದ ರುದ್ರಾಭಿಷೇಕ ಸೇವೆಯು ನಡೆಯಲಿದೆ. ಬಳಿಕ ಕೇಂದ್ರದ ಸದಸ್ಯರು ಹಾಗೂ ಸ್ಥಳೀಯ ಭಜಕರಿಂದ ಭಜನಾ ಸಂಕೀರ್ತನೆಯು ನಡೆಯಲಿದ್ದು ಈ ಸಂದರ್ಭದಲ್ಲಿ ವಿಶೇಷವಾಗಿ ಸತ್ಸಂಗ ಕಾರ್ಯಕ್ರಮವು ನಡೆಯಲಿರುವುದು.
ರಾತ್ರಿ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಲಿರುವುದು.