ಸುಳ್ಯ:ಸಂಸ್ಕಾರ ದೀಪಿಕೆ ಶಿಕ್ಷಣದ ಸಮಾರೋಪ ಸಮಾರಂಭ

0

ಸುಳ್ಯ ಚೆನ್ನಕೇಶವ ದೇವಾಲಯದಲ್ಲಿ ನಡೆಯುತ್ತಿರುವ ಹಿಂದೂ ಧಾರ್ಮಿಕ ಶಿಕ್ಷಣ ‘ಸಂಸ್ಕಾರ ದೀಪಿಕೆ’ಯ ದ್ವಿತೀಯ ವರ್ಷದ ತರಗತಿಯ ಸಮಾರೋಪ ಸಮಾರಂಭವು ಮಾ. 3 ರಂದು ಚೆನ್ನಕೇಶವ ದೇವಾಲಯದ ಸಭಾಂಗಣದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಕಸ್ತೂರಿ ನರ್ಸರಿಯ ಮ್ಹಾಲಕ ರೊ.ಮಧುಸೂದನ್ ಕುಂಭಕೋಡು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶಾಸಕಿ ಕು.ಭಾಗೀರಥಿ ಮುರುಳ್ಯ, ಕೇರ್ಪಡ ಮಹಿಷಿಮರ್ದಿನಿ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು.


ಸಂಸ್ಕಾರ ಶಿಕ್ಷಣದ ರುವಾರಿ, ಮಕ್ಕಳ ತಜ್ಞ ಕೃಷ್ಣ ಭಟ್ ಬಿ.ಎನ್ . ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಕಾರ ಶಿಕ್ಷಣದ ಅವಶ್ಯಕತೆಯನ್ನು ವಿವರಿಸಿದರು.

ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಪ್ರಾರ್ಥನೆ, ಶ್ಲೋಕ, ಭಗವದ್ಗೀತೆ ಪಠಣ ಮಾಡಿದರು .ಭಜನೆ,ಕುಣಿತ ಭಜನೆಯನ್ನೂ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಸಂಸ್ಕಾರ ಶಿಕ್ಷಣದ ಗುರುಗಳಾದ ವೇದಮೂರ್ತಿ ವೆಂಕಟೇಶ ಶಾಸ್ತ್ರೀ, ಅಚ್ಯುತ ಅಟ್ಲೂರು, ಪ್ರಸನ್ನ ಐವರ್ನಾಡು, ದೇವಿಪ್ರಸಾದ್ ಕಾಯರ್ತೋಡಿ, ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ರವರನ್ನು ಗೌರವಿಸಲಾಯಿತು.ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು
.ಚೆನ್ನಕೇಶವ ದೇವಾಲಯದ ಅನುವಂಶೀಯ ಆಡಳಿತ ಮೊಕ್ತೇಸ ಹರಪ್ರಸಾದ್ ತುದಿಯಡ್ಕ , ಹಾಗೂ ಸಂಸ್ಕಾರ ಶಿಕ್ಷಣದ ರುವಾರಿ, ಖ್ಯಾತ ದಂತ ವೈದ್ಯೆ ಶ್ರೀಮತಿ ವಿದ್ಯಾ ಶಾರದೆ . ಶ್ರೀಕೃಷ್ಣ ಭಟ್ ಪೂರ್ಣ ಸಹಕಾರ ನೀಡಿದರು.ಎಲ್ಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಕಾರ ಶಿಕ್ಷಣದ ಗುರುಗಳಾದ ವೇದಮೂರ್ತಿ ವೆಂಕಟೇಶ ಶಾಸ್ತ್ರೀಯವರು ಸ್ವಾಗತಿಸಿದರು.ಸಂಸ್ಕಾರ ಶಿಕ್ಷಣದ ರುವಾರಿ ಶ್ರೀಮತಿ ಲತಾ ಮಧುಸೂಧನ್ ಎಲ್ಲಾ ಶಿಕ್ಷಕರನ್ನು ಪರಿಚಯಿಸಿದರು.ಅಚ್ಯುತ ಅಟ್ಲೂರು
ನಿರೂಪಿಸಿದರು.ದೇವಿಪ್ರಸಾದ್ ವಂದಿಸಿದರು,