ಮೇನಾಲ‌ದಲ್ಲಿ ದೈವಂಕಟ್ಟು ಮಹೋತ್ಸವ

0

ಅಚ್ಚುಕಟ್ಟಾಗಿರುವ ಊಟದ ವ್ಯವಸ್ಥೆ : 10 ಕಡೆಯಲ್ಲಿ ವಾಹನ ಪಾರ್ಕಿಂಗ್ ಗೆ ಅವಕಾಶ

ಅಜ್ಜಾವರ ಗ್ರಾಮದ ಮೇನಾಲದಲ್ಲಿ ಮೂರು ದಿನಗಳ ಕಾಲ ನಡೆದ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರಿಗೆ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. 10 ಕಡೆಗಳಲ್ಲಿ ವಾಹನ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ. ಈ ವ್ಯವಸ್ಥೆ ಕಾರ್ಯಕ್ರಮಕ್ಕೆ ಆಗಮಿಸಿದ ಜನರ ಶ್ಲಾಘನೆಗೆ ಕಾರಣವಾಯಿತು.

ದೇವಸ್ಥಾನದ ಪಕ್ಕದಲ್ಲಿ ಮರಕ್ಕಳವನ್ನು ಮಾಡಲಾಗಿದ್ದು ದೈವಗಳ ನರ್ತನ ಸೇವೆ ಅಲ್ಲಿ ನಡೆಯುತ್ತದೆ. ಪಕ್ಕದ ಹರಿಪ್ರಕಾಶ್ ಕುರುಂಜಿ ಯವರ ರಬ್ಬರ್ ತೋಟದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. 5 ಊಟದ ಕೌಂಟರ್ ಮಾಡಲಾಗಿದ್ದು ರಶ್ ಆಗದಂತೆ ನೋಡಿಕೊಳ್ಳಲಾಗಿದೆ. ವಿಶೇಷ ಅತಿಥಿಗಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಸ್ಯಾಹಾರಿ ಗಳಿಗೂ ಪ್ರತ್ಯೇಕ ಕೌಂಟರ್ ಮಾಡಲಾಗಿದೆ.

10 ಕಡೆಯಲ್ಲಿ ವಾಹನ ಪಾರ್ಕಿಂಗ್

ಮಹೋತ್ಸವಕ್ಕೆ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ೧೦ ಕಡೆಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಸುಳ್ಯದಿಂದ ಬರುವವರು ಮೇನಾಲ ಶಾಲಾ ಮೈದಾನದಲ್ಲಿ, ಅಂಬೇಡ್ಕರ್ ಸಭಾಭವನದ ಪಕ್ಕದಲ್ಲಿ, ಶ್ರೀಕೃಷ್ಣ ಭಜನಾ ಮಂದಿರದ ಪಕ್ಕದಲ್ಲಿ, ಅಂಬೇಡ್ಕರ್ ಭವನದ ಪಕ್ಕದ ಖಾಲಿ ಜಾಗದಲ್ಲಿ, ಮೇನಾಲ ಕಾಲನಿ ಪಕ್ಕದಲ್ಲಿರುವ ಜಾಗದಲ್ಲಿ ಹೀಗೆ ಅಲ್ಲಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದರೆ, ಕೇರಳದಿಂದ ಅಜ್ಜಾವರ ಮೂಲಕ ಮೇನಾಲಕ್ಕೆ ಬರುವವರು ಮೇದಿನಡ್ಕ ದ್ವಾರದ ಮೂಲಕ ಹೋಗಿ ಅಲ್ಲಿ ವಾಹನ ಪಾರ್ಕಿಂಗ್ ಮಾಡಿಯೂ ಮಹೋತ್ಸವ ನಡೆಯುವ ಜಾಗಕ್ಕೆ ಬರಬಹುದು.
ಗಣ್ಯರಿಗೆ ಮಹೋತ್ಸವ ನಡೆಯುವ ಜಾಗಕ್ಕೆ ಹೋಗುವ ಮುಖ್ಯ ರಸ್ತೆಯ ಬದಿಯಲ್ಲಿರುವ ಖಾಲಿ ಜಾಗವನ್ನು ಮೀಸಲಿಡಲಾಗಿದೆ. ದ್ವಿಚಕ್ರ ಸವಾರರು ಹಾಗೂ ಇತರ ವಾಹನದಾರರಿಗೆ ಪ್ರತ್ಯ ಪ್ರತ್ಯೇಕ ಜಾಗವನ್ನು ಮಾಡಲಾಗಿದೆ.