ದ.ಕ. ಜಿಲ್ಲೆಯ ಪ್ರತಿನಿಧಿಯಾಗಿ ಶ್ರೀಮತಿ ಮೋಹಿನಿ ಕಲ್ಲುಗುಂಡಿ ಆಯ್ಕೆ
ನವದೆಹಲಿಯ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಲಕಪತಿ ದೀದಿ ಅವರುಗಳೊಂದಿಗೆ ಸಂವಾದ ಕಾರ್ಯಕ್ರಮವು ಮಾ.11ರಂದು ಜರುಗಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಶ್ರೀಮತಿ ಮೋಹಿನಿ ಕಲ್ಲುಗುಂಡಿ ಅವರು ಆಯ್ಕೆಯಾಗಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಧೀನದಲ್ಲಿ ಲಕಪತಿ ದೀದಿ ಸಂವಾದ ಕಾರ್ಯಕ್ರಮವು ಜರುಗಲಿದ್ದು, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ವಾರ್ಷಿಕ ಒಂದು ಲಕ್ಷಕ್ಕೂ ಅಧಿಕ ಆದಾಯಗಳಿಸುತ್ತಿರುವ ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಒಟ್ಟು 20 ಮಂದಿ ಲಕಪತಿ ದೀದಿ ಮಹಿಳೆಯಲ್ಲಿ ಶ್ರೀಮತಿ ಮೋಹಿನಿ ಅವರು ದ.ಕ. ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ಶ್ರೀಮತಿ ಮೋಹಿನಿ ಅವರು ಪ್ರಸ್ತುತ ದ.ಕ. ಸಂಪಾಜೆ ಗ್ರಾಮದ ಕೃಷಿ ಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದ.ಕ. ಸಂಪಾಜೆ ಗ್ರಾಮದ ಕಲ್ಲುಗುಂಡಿ ಪಂಚಮಿ ಸ್ಟೋರ್ ಮಾಲಕ ವಿಶ್ವನಾಥ ಅವರ ಪತ್ನಿ.