ಆಲೆಟ್ಟಿ ಅಂಗನವಾಡಿ ಕೇಂದ್ರದ ಸುಸಜ್ಜಿತ ನೂತನ ಕಟ್ಟಡದ ಉದ್ಘಾಟನಾ ‌ಸಮಾರಂಭ

0

ಮುಗ್ದ ಮಕ್ಕಳ ಮನಸ್ಸನ್ನು ಅರಿತು ಪೋಷಣೆ ಮಾಡುವ ಮಹತ್ತರ ಜವಬ್ದಾರಿ ಅಂಗನವಾಡಿ ಕೇಂದ್ರದ ಮೂಲಕ ಸಾಕಾರಗೊಳ್ಳುತ್ತಿದೆ- ಭಾಗೀರಥಿ ಮುರುಳ್ಯ

ಆಲೆಟ್ಟಿ ಕೇಂದ್ರ ಭಾಗದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಸುಸಜ್ಜಿತ ನೂತನ ಕಟ್ಟಡ ನಿರ್ಮಾಣಗೊಂಡಿದ್ದು ಇದರ ಉದ್ಘಾಟನಾ ಸಮಾರಂಭವು ಮಾ.9 ರಂದು ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಆಲೆಟ್ಟಿ ಪಂಚಾಯತ್ ಅಧ್ಯಕ್ಷೆ ವೀಣಾವಸಂತ ರವರು ವಹಿಸಿದ್ದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ
ಕು. ಭಾಗೀರಥಿ ಮುರುಳ್ಯ ರವರು ಕಟ್ಟಡವನ್ನು ರಿಬ್ಬನ್ ಕತ್ತರಿಸಿ, ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಪುಟಾಣಿ ಮಕ್ಕಳ ಜತೆ ಶಾಸಕರು ಬೆರೆತರು.


ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಕಮಲಾ ನಾಗಪಟ್ಟಣ,
ಶಿಶು ಕಲ್ಯಾಣ ಇಲಾಖೆಯ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೈಲಜಾ, ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಪಂಚಾಯತ್ ಸದಸ್ಯ ಚಂದ್ರಕಾಂತ ನಾರ್ಕೋಡು, ಉಬರಡ್ಕ ಮಿತ್ತೂರು ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಮೇಲ್ವಿಚಾರಕಿ ದೀಪಿಕಾ,ಬಾಲವಿಕಾಸ ಸಮಿತಿ ಅಧ್ಯಕ್ಷೆ ನಳಿನಾಕ್ಷಿ ಉಪಸ್ಥಿತರಿದ್ದರು.
ಕಟ್ಟಡದ ಕಾಮಗಾರಿ ನಿರ್ವಹಿಸಿದ ಹರೀಶ್ ರೈ ಯವರನ್ನು ಸನ್ಮಾನಿಸಲಾಯಿತು.

ಶ್ರೀಮತಿ ಗೌರಿ ಆಲೆಟ್ಟಿ ಪ್ರಾರ್ಥಿಸಿದರು. ಪುಷ್ಪಲತಾ ಮೊರಂಗಲ್ಲು ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ಮಮತಾ ವರದಿ ವಾಚಿಸಿದರು. ಮೇಲ್ವಿಚಾರಕಿ ದೀಪಿಕಾ ವಂದಿಸಿದರು. ಆಲೆಟ್ಟಿ ಪಂಚಾಯತ್ ಸದಸ್ಯ ಶಿವಾನಂದ ರಂಗತ್ತಮಲೆ ಕಾರ್ಯಕ್ರಮ ನಿರೂಪಿಸಿದರು.
ಗ್ರಾಮದ ಅಂಗನವಾಡಿ ಕೇಂದ್ರದಕಾರ್ಯಕರ್ತೆಯರು, ಸಹಾಯಕಿಯರು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು, ಶಾಲೆಯ ಶಿಕ್ಷಕರು, ಶಾಲೆಯ ಪೋಷಕರು, ಸ್ಥಳೀಯರು ಭಾಗವಹಿಸಿದರು.