ಮಾ.16 – 17: ಸಂಪಾಜೆ ಕಡೆಪಾಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮೊಗೇರರು, ತನಿಮಾನಿಗ – ಕ್ಷೇತ್ರಪಾಲಕ ಗುಳಿಗ ಹಾಗೂ ಸ್ವಾಮಿ ಕೊರಗಜ್ಜ ದೈವಗಳ ನೇಮೋತ್ಸವ

0

ನೇಮೋತ್ಸವಕ್ಕೆ ಗೊನೆ ಮುಹೂರ್ತ

ದ.ಕ. ಸಂಪಾಜೆ ಗ್ರಾಮದ ಕಡೆಪಾಲ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಮೊಗೇರರು, ತನ್ನಿಮಾನಿಗ, ಕ್ಷೇತ್ರ ಪಾಲಕ ಗುಳಿಗ ಹಾಗೂ ಕಾರ್ಣಿಕದ ದೈವ ಸ್ವಾಮಿ ಕೊರಗಜ್ಜ ದೈವಗಳ ನೇಮೋತ್ಸವವು ಮಾ.16 ‌ಮತ್ತು 17ರಂದು ಜರುಗಲಿದೆ.

ಮಾ.16ರಂದು ಬೆಳಿಗ್ಗೆ ಗಣಪತಿ ಹವನ, ಸ್ಥಳಶುದ್ಧಿ, ಸಂಜೆ ಗುಳಿಗ ದೈವದ ನೇಮ, ಪ್ರಸಾದ ವಿತರಣೆ, ಮೊಗೇರ ದೈವದ ಭಂಡಾರ ತೆಗೆಯುವುದು, ರಾತ್ರಿ ಅನ್ನಸಂತರ್ಪಣೆ, ಶ್ರೀ ಮೊಗೇರ ದೈವಗಳ ಗರಡಿ ಇಳಿಯುವುದು, ಮಧ್ಯರಾತ್ರಿ ಶ್ರೀ ತನ್ನಿಮಾನಿಗ ದೈವದ ಗರಡಿ ಇಳಿಯುವುದು, ಪಾತ್ರಿಗಳ ದರ್ಶನ ಸವಾರಿ ನಡೆಯಲಿದೆ.

ಮಾ.17ರಂದು ಬೆಳಿಗ್ಗೆ ಪ್ರಸಾದ ವಿತರಣೆ, ಬಳಿಕ ಕಾರ್ಣಿಕದ ದೈವ ಸ್ವಾಮಿ ಕೊರಗಜ್ಜ ದೈವದ ನೇಮ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ.

ನೇಮೋತ್ಸವಕ್ಕೆ ಮಾ.9ರಂದು ಬೆಳಿಗ್ಗೆ ಮುಹೂರ್ತದ ಗೊನೆ ಕಡಿಯಲಾಯಿತು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಈಶ್ವರ ಕಡೆಪಾಲ, ಕಾರ್ಯದರ್ಶಿ ಹರ್ಷಿತ್ ದೊಡ್ಡಡ್ಕ, ಕೋಶಾಧಿಕಾರಿ ರಾಜೇಶ್ ಬಿ.ವೈ., ದೈವಸ್ಥಾನದ ಪೂಜಾರಿ ಶೇಷಪ್ಪ ದೊಡ್ಡಡ್ಕ, ಸದಸ್ಯರುಗಳಾದ ಗುರುವಪ್ಪ ಕೆ.ಸಿ., ಆಡಳಿತ ಸಮಿತಿ ಮಾಜಿ ಅಧ್ಯಕ್ಷ ತೇಜಸ್ ಕಡೆಪಾಲ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.