ಸರಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಚಿತ್ರಣವೇ ಬದಲು

0

ರಾಜ್ಯ ದಿವಾಳಿಯಾಗಿದೆ ಎನ್ನುವ ವಿರೋಧ ಪಕ್ಷದವರ ಮನಸ್ಸೇ ದಿವಾಳಿಯಾಗಿದೆ

ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಮಂಜುನಾಥ ಭಂಡಾರಿ ಪ್ರತಿಪಾದನೆ

ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಜಾರಿಗೆ ತಂದ ಪಂಚ ಗ್ಯಾರಂಟಿಗಳಿಂದ ರಾಜ್ಯದ ಚಿತ್ರಣವೇ ಬದಲಾಗಿದೆ. ಪ್ರತಿ ಕುಟುಂಬದ ಆರ್ಥಿಕ ಸ್ಥಿತಿ ಎತ್ತರಿಸಲ್ಪಟ್ಟಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಈ ಯೋಜನೆಗಳು ಚುನಾವಣಾ ಉದ್ದೇಶದಿಂದ ಮಾಡಿದ ಯೋಜನೆಗಳಲ್ಲ. ರಾಜ್ಯದ ಪ್ರತಿ ಕುಟುಂಬದ ಪರಿಸ್ಥಿತಿ ಅರಿತು ಮಾಡಿದ ಯೋಜನೆ. ಈ ಯೋಜನೆಯಿಂದ ಪ್ರತಿ ಫಲಾನುಭವಿ ಕುಟುಂಬವೂ ಮೂರು ಸಾವಿರದಿಂದ ಆರು ಸಾವಿರದವರೆಗೆ ಆದಾಯ ಪಡೆಯುವಂತಾಗಿದೆ ಎಂದವರು ಹೇಳಿದರು.

ನಮ್ಮ ಪ್ರಣಾಳಿಕೆ ನೋಡಿ ಬಿಜೆಪಿಯವರು ಇದೊಂದು ಚುನಾವಾಣಾ ಗಿಮಿಕ್ ಅಂದ್ರು. ಈಡೇರದು ಅಂದ್ರು. ನಾವು ಈಡೇರಿಸಿದ ಬಳಿಕ ಈಗ ರಾಜ್ಯ ದಿವಾಳಿಯಾಗಿದೆ ಎನ್ನುತ್ತಿದ್ದಾರೆ. ದಿವಾಳಿಯಾಗಿರುವುದು ಅವರ ಮನಸ್ಸು ಎಂದ ಅವರು ಯಾವುದೇ ಸರಕಾರ ಬಜೆಟ್ ಮಂಡಿಸುವಾಗ ಒಂದು ವರ್ಷದ ಅವಧಿಯ ಬಜೆಟ್ ಮಂಡಿಸಿ ಅದಕ್ಕಾಗಿ ಹಣ ತೆಗೆದಿರಿಸುತ್ತದೆ. ನಮ್ಮ ಸರಕಾರವೂ ಅದನ್ನೇ ಮಾಡಿದೆ. ಹಾಗಾಗಿ ಲೋಕಸಭಾ ಚುನಾವಣೆ ಕಳೆದ ಮೇಲೆ ಯೋಜನೆ ನಿಲ್ಲುತ್ತದೆ ಎಂಬ ಅಪಪ್ರಚಾರ ನಂಬಬೇಡಿ. ಕಾಂಗ್ರೆಸ್ ಸರಕಾರ ಅಸ್ತಿತ್ವದಲ್ಲಿ ಇರುವವರೆಗೂ ಈ ಯೋಜನೆ ಇದ್ದೇ ಇರುತ್ತದೆ ಎಂದವರು ಹೇಳಿದರು.