ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘ ಸುಳ್ಯ ಇದರ ಮಾಸಿಕ ಸಭೆ ,ಸಾಧಕರಿಗೆ ಸನ್ಮಾನ ,ಕೆವಿಜಿ ಬ್ಯಾಂಕ್ ನ ಹಲವು ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ಮಾ.10 ರಂದು ಪೆರುವಾಜೆ ಜೆ.ಡಿ ಅಡಿಟೋರಿಯಂ ನಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಯಂ. ಹರಿಶ್ಚಂದ್ರರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ, ,ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಸಾಯಿ ಪ್ರಸಾದ್ ಎಸ್. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಬೆಳ್ಳಾರೆ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಸತೀಶ್ ಪಾಂಬಾರು ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು.
ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯ.ಸ.ಮಾಜಿ ಅಧ್ಯಕ್ಷ ಪಿ.ಪದ್ಮನಾಭ ಶೆಟ್ಟಿ,ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಚಂದ್ರಶೇಖರ ಭಟ್, ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭಜನಾ ಮಂಡಳಿ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಮುಂಡುಗಾರುರವರನ್ನು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಹಾಗೂ ಪೆರುವಾಜೆ ದೇವಸ್ಥಾನದ ವ್ಯ.ಸ.ಮಾಜಿ ಸದಸ್ಯರಾದ ಅರ್ಚಕ ರಾದ ಶ್ರೀನಿವಾಸ ಹೆಬ್ಬಾರ್,ವೆಂಕಟಕೃಷ್ಣ ರಾವ್,ದಾಮೋದರ ನಾಯ್ಕ,ಜಗನ್ನಾಥ ಕೆ,ಶ್ರೀಮತಿ ಯಶೋಧ ಪ್ರಭು,ಜಯಪ್ರಕಾಶ್ ರೈ ಬಿ,ನಾರಾಯಣ ಕೆ, ಶ್ರೀಮತಿ ಭಾಗ್ಯಲಕ್ಷ್ಮೀ ಯವರನ್ನು ಸನ್ಮಾನಿಸಲಾಯಿತು.
ಕೆವಿಜಿ ಬ್ಯಾಂಕ್ ಬೆಳ್ಳಾರೆ ಶಾಖೆಯ ಮೆನೇಜರ್ ನವೀನ್ ಹೆಚ್.ಪಿ.ಇವರು ಕೆವಿಜಿ ಬ್ಯಾಂಕಿನಿಂದ ಜನರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಬಳಿಕ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಪಿಗ್ಮಿ ಸಂಗ್ರಾಹಕರ ಸಂಘದ ಉಪಾಧ್ಯಕ್ಷ ವಸಂತ ಬೋರ್ಕರ್, ಕಾರ್ಯದರ್ಶಿ ಸುನಿಲ್ ಜೆ,ಖಜಾಂಜಿ ಪುಷ್ಪಾಧರ ಕೆ.ಜಿ, ಜತೆ ಕಾರ್ಯದರ್ಶಿ ಮಹಾಬಲ ರೈ,ನಿರ್ದೇಶಕರಾದ ಹಿರಿಯಣ್ಣ ಮತ್ತು ರತ್ನಾವತಿ ಬೆಳ್ಳಾರೆ ಹಾಗೂ ಪಿಗ್ಮಿ ಸಂಗ್ರಾಹಕರು ಉಪಸ್ಥಿತರಿದ್ದರು.