ಸುಬ್ರಹ್ಮಣ್ಯದ ಸೇತುವೆ ಹಾಗೂ ರಸ್ತೆ ಅಭಿವೃದ್ಧಿಗೆ 6.5 ಕೋಟಿ ಅನುದಾನ, ಕಡಬದಲ್ಲಿ ಶಂಕುಸ್ಥಾಪನೆ

0

ಸುಬ್ರಹ್ಮಣ್ಯದ ಸೇತುವೆ ಹಾಗೂ ರಸ್ತೆ ಅಭಿವೃದ್ಧಿಗೆ 6.5 ಕೋಟಿ ಅನುದಾನದ ಕಾಮಗಾರಿಗೆ ಕಡಬದಲ್ಲಿ ಮಾ.10 ನಡೆದ ಗ್ಯಾರಂಟಿ ಸಮಾವೇಶದಲ್ಲಿ ಸಚಿವ ದಿನೇಶ್ ಗುಂಡೂರಾವ್ ಶಂಕುಸ್ಥಾಪನೆ ನೆರವೇರಿತು.

ಕುಕ್ಕೆ ಸುಬ್ರಹ್ಮಣ್ಯ ಹಾಗೂ ಮಂಜೇಶ್ವರ ರಸ್ತೆ,ಕುಮಾರಧಾರ ಬಳಿ ದರ್ಪಣ ತೀರ್ಥ ನದಿಗೆ ಸೇತುವೆ ನಿರ್ಮಾಣ ಹಾಗೂ ಕುಮಾರಧಾರ ಬಳಿ ಮುಳುಗುತಿದ್ದ ರಸ್ತೆಯನ್ನು ಎತ್ತರಕ್ಕೆ ಏರಿಸಿ ಮುಳುಗಡೆಯಿಂದ ತಪ್ಪಿಸಲು ರಸ್ತೆ ನಿರ್ಮಾಣಕ್ಕೆ 6.5ಕೋಟಿ ಅನುದಾನವನ್ನು ಕರ್ನಾಟಕ ಸರಕಾರ ಮಂಜೂರು ಮಾಡಿದೆ.

ಸುಬ್ರಹ್ಮಣ್ಯ ದೇವಳವನ್ನು ಸಂಪರ್ಕಿಸುವ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿ ಯ ಕುಮಾರಧಾರದಲ್ಲಿ ಇರುವ ದರ್ಪಣ ತೀರ್ಥ ಮುಳುಗು ಸೇತುವೆಯನ್ನು ಹಾಗೂ ಕುಮಾರಧಾರ ದಿಂದ ಪರ್ವತಮುಖಿ ವರೆಗಿನ ರಸ್ತೆಯನ್ನು ಎತ್ತರಕ್ಕೆ ಏರಿಸಿ ಸರ್ವ ಋತು ಸಂಪರ್ಕ ಸೇತುವೆ ಹಾಗೂ ರಸ್ತೆಯನ್ನಾಗಿ ಮರು ನಿರ್ಮಿಸಲು ಕ್ರಮವಾಗಿ ₹450 ಲಕ್ಷಗಳು ಹಾಗೂ ₹200 ಲಕ್ಷಗಳೊಂದಿಗೆ ಒಟ್ಟು ₹650 ಲಕ್ಷಗಳ ಅನುದಾನ ಮಂಜೂರಾಗಿದೆ.

ಪ್ರತಿ ಮಳೆಗಾಲದಲ್ಲಿ ಪ್ರತಿ ವರ್ಷವೂ ಕುಮಾರಧಾರ ನದಿ ತುಂಬಿ ಹರಿಯುವ ಸಂದರ್ಭದಲ್ಲಿ
ಸುಬ್ರಹ್ಮಣ್ಯ ಮಂಜೇಶ್ವರ ರಸ್ತೆ ಮುಳುಗಡೆ ಆಗುತ್ತಿತ್ತು,
ಕಳೆದ ವರ್ಷ ಕಾಲೇಜು ವಿದ್ಯಾರ್ಥಿಗಳು ನದಿ ನೀರನ್ನು ದಾಟಿ ಪರೀಕ್ಷೆ ಬರೆದ ಘಟನೆ ನಡೆದಿದ್ದು ಬಾರಿ ಸುದ್ದಿಯಾಗಿತ್ತು,
ಸಾರ್ವಜನಿಕರು, ಶಾಲಾ,ಕಾಲೇಜು ಮಕ್ಕಳು, ಈ ರಸ್ತೆಯಲ್ಲಿ ಸಂಚಾರಿಸುವವರು. ತೀರಾ ಸಮಸ್ಯೆ ಪಡುತ್ತಿದ್ದರು.
ಸೇತುವೆ ನಿರ್ಮಾಣ ಆಗಬೇಕು ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕು ಎಂದು ಅದೆಷ್ಟೋ ಬಾರಿ ಮಾಧ್ಯಮದ ಮೂಲಕ, ಸುಬ್ರಹ್ಮಣ್ಯ ಹರೀಶ್ ಇಂಜಾಡಿ, ಶಿವರಾಮ ರೈ ಮತ್ತಿತರರು ಆಗ್ರಹಿಸಿದ್ದರು. ಈ ಕಾಮಗಾರಿಗೆ
ಇಷ್ಟು ದೊಡ್ಡ ಮೊತ್ತದ ಅನುದಾನ ತರುವಲ್ಲಿ ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ ಪ್ರಮಾಣಿಕ ಪಯತ್ನ ಮಾಡಲಾಗಿತ್ತು ಎಂದು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.