ಕೆನರಾ ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆ : ಮಾ. 22ರಂದು ಪಂಚಾಯತ್ ವತಿಯಿಂದ ಪ್ರತಿಭಟನೆ

0

ಸಂಪಾಜೆ ಗ್ರಾ.ಪಂ.ನಲ್ಲಿ ಸಾಮಾನ್ಯ ಸಭೆಯಲ್ಲಿ ನಿರ್ಣಯ

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು.

ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ ಲೆಕ್ಕ ಪತ್ರ ಮಂಡಿಸಿದರು ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ ಸಾರ್ವಜನಿಕರಿಂದ ಬಂದ ಅರ್ಜಿ ಸಭೆಯಲ್ಲಿ ಓದಿ ತಿಳಿಸಿದರು. ಸಂಪಾಜೆ ಕೆನರಾ ಬ್ಯಾಂಕ್‌ನಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಸದಸ್ಯರುಗಳಾದ ಜಿ. ಕೆ. ಹಮೀದ್ ಗೂನಡ್ಕ ಹಾಗೂ ರಜನಿ ಶರತ್ ಪ್ರಸ್ತಾಪಿಸಿ, ಧರಣಿ ಬಗ್ಗೆ ದಿನಾಂಕ ನಿಗದಿಪಡಿಸುವಂತೆ ತಿಳಿಸಿದಾಗ ಸದಸ್ಯರು ಮಾರ್ಚ್ 21ರ ಒಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮಾರ್ಚ್ 22 ರಂದು ಕೆನರಾ ಬ್ಯಾಂಕ್ ಮುಂದೆ ಪಂಚಾಯತ್ ನೇತೃತ್ವದಲ್ಲಿ ಧರಣಿ ನಡೆಸಲು ನಿರ್ಣಸಲಾಯಿತು.

ಕುಡಿಯುವ ನೀರು ಸಮರ್ಪಕವಾಗಿ ಬಳಕೆ ನೀರು ಪೋಲು ಮಾಡುವವರ ನಳ್ಳಿ ಸಂಪರ್ಕ ಕಡಿತ.. ತುರ್ತು ಬೋರ್ವೆಲ್ ರಿಪೇರಿ, ಕುಡಿಯುವ ನೀರಿನ ಪಂಪ್ ಗಳಿಗೆ ಸೋಲಾರ್ ಅಳವಡಿಸಲು ಸರಕಾರಕ್ಕೆ ಪತ್ರ, ಅಂಗನವಾಡಿ ಗಳಿಗೆ ಸಕಾಲದಲ್ಲಿ ಆಹಾರ ತಲುಪದ ಬಗ್ಗೆ ಇಲಾಖೆಯ ಗಮನಕ್ಕೆ ತರಲು ನಿರ್ಣಯ ಮಾಡಲಾಯಿತು ಗೂನಡ್ಕ ಶಾರದಾ ಶಾಲೆಯ ಮತದಾನ ಕೇಂದ್ರ ಹೊಸ ಕಟ್ಟಡಕ್ಕೆ ಬದಲಾವಣೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಸದಸ್ಯರುಗಳಾದ ಸೋಮಶೇಖರ್ ಕೊಯಿಂಗಾಜೆ, ಅಬೂಸಾಲಿ, ಸವಾದ್ ಗೂನಡ್ಕ, ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಅನುಪಮಾ, ಲಿಸ್ಸಿ ಮೊನಾಲಿಸಾ, ಸುಶೀಲ, ಜಗದೀಶ್ ರೈ, ವಿಜಯ ಕುಮಾರ್ ಉಪಸ್ಥಿತರಿದ್ದರು.