ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡರು ಮಂಡೆಕೋಲು ಗ್ರಾಮದ ಮುರೂರು – ದೇವರಗುಂಡ ಅಂಗನವಾಡಿಗೆ ಕೇಂದ್ರಕ್ಕೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.7.50 ಲಕ್ಷ ವೆಚ್ಚದಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು ಕೊಡುಗೆಯಾಗಿ ನೀಡಿದ್ದು ನೂತನ ಕಟ್ಟಡದ ಉದ್ಘಾಟನೆ ಮಾ.12ರಂದು ನಡೆಯಿತು.
ಡಿ.ವಿ.ಸದಾನಂದ ಗೌಡರ ಪುತ್ರ ಹಾಗೂ ಬೆಂಗಳೂರಿನ ಸದಾಸ್ಮಿತ ಫೌಂಡೇಶನ್ ಅಧ್ಯಕ್ಷ ಕಾರ್ತಿಕ್ ಡಿ.ಎಸ್. ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ, “ತಂದೆಯವರ ಕಾರ್ಯಕ್ಷೇತ್ರ ಈಗ ಬೆಂಗಳೂರು ಆಗಿದ್ದರೂ ಊರಿನ ಮೇಲೆ ಅಪಾರವಾದ ಪ್ರೀತಿ ಇದೆ. ಅವರ ಕೊಡುಗೆಗಳು ಮುಂದೆಯೂ ಊರಿಗೆ ಇರಲಿದೆ” ಎಂದು ಹೇಳಿದರು.
ಮಂಡೆಕೋಲು ಗ್ರಾ.ಪಂ. ಅಧ್ಯಕ್ಷ ಕುಶಲ ಉದ್ದಂತಡ್ಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪ್ರತಿಮಾ ಹೆಬ್ಬಾರ್, ಸಿಡಿಪಿಒ ಶೈಲಜಾ, ಪಂಚಾಯತ್ ಮಾಜಿ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ರಾಧಿಕ ಮೈತಡ್ಕ, ಪ್ರಶಾಂತಿ ಮಂಡೆಕೋಲು ಬೈಲು, ಅನಿಲ್ ತೋಟಪ್ಪಾಡಿ, ಪಿಡಿಒ ರಮೇಶ್, ಬಾಲವಿಕಾಸ ಸಮಿತಿ ಅಧ್ಯಕ್ಷೆ ರಶ್ಮಿ ವೇದಿಕೆಯಲ್ಲಿ ಇದ್ದರು.
ಅಂಗನವಾಡಿ ಕಾರ್ಯಕರ್ತೆ ಪ್ರಿಯಲತಾ ಸ್ವಾಗತಿಸಿ, ಅಂಗನವಾಡಿ ಕಟ್ಟಡ ಬರಲು ಶ್ರಮವಹಿಸಿದ ಬಾಲಚಂದ್ರ ದೇವರಗುಂಡ ವಂದಿಸಿದರು.
ಸಾವಿತ್ರಿ ಕಣೆಮರಡ್ಕ ಹಾಗೂ ಬಾಲಕೃಷ್ಣ ಮಾವಂಜಿ ಕಾರ್ಯಕ್ರಮ ನಿರೂಪಿಸಿದರು.