ಬೂಡು – ಬೆಳ್ಳಾರೆ ಶ್ರೀ ಮೊಗೇರ್ಕಳ ದೈವಗಳ ಪ್ರತಿಷ್ಠೆ

0

ಮಾ.14,15 : ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವ

ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಬೂಡು – ಬೆಳ್ಳಾರೆ ಶ್ರೀ ಮೊಗೇರ್ಕಳ ದೈವಗಳ ಪ್ರತಿಷ್ಠೆ,
ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಬಾಬು ಯು ಉಪ್ಪಳ ಧರ್ಮದರ್ಶಿಗಳು ಶ್ರೀ ಚೌಡಿ ಚಾಮುಂಡೇಶ್ವರಿ ಆರಾಧಕರು ಶ್ರೀ ಕ್ಷೇತ್ರ ಪಚ್ಲಂಪಾರೆ ಇವರ ನೇತೃತ್ವದಲ್ಲಿ ಕರ್ಮಯೋಗ ಮತ್ತು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮಾ.12 ರಿಂದ ಪ್ರಾರಂಭಗೊಂಡಿದ್ದು ಮಾ.15 ರವರೆಗೆ ನಡೆಯಲಿರುವುದು.
ಮಾ.12 ರಂದು ರಾತ್ರಿ ರಾಧಾಕೃಷ್ಣ ಅಡ್ಕಾರುರವರ ನೇತೃತ್ವದಲ್ಲಿ ಕುಟ್ಟಿಪೂಜೆ ನಡೆಯಿತು.
ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಮಾ.13 ರಂದು ಬೆಳಿಗ್ಗೆ ಗಣಪತಿ ಹೋಮ ನಡೆಯಿತು.


ನಂತರ ಮೊಗೇರ್ಕಳ ದೈವಗಳ ಪ್ರತಿಷ್ಠೆ,ಪ್ರಸಾದ ವಿತರಣೆ ನಡಯಿತು.
ಬಳಿಕ ಸಾಂಸ್ಜೃತಿಕ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಆಡಳಿತ ಸಮಿತಿ ಅಧ್ಯಕ್ಷ ಸುಂದರ ತೊಡಿಕಾನ ನೇತೃತ್ವ ವಹಿಸಲಿದ್ದಾರೆ.
ಮಾಜಿ ಸಚಿವ ಎಸ್.ಅಂಗಾರ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಲಿದ್ದಾರೆ.ವಿಟ್ಲ ಉಪತಹಶೀಲ್ದಾರರಾದ ವಿಜಯ ವಿಕ್ರಮ್ ಗಾಂಧಿಪೇಟೆ ಉಪನ್ಯಾಸ ನೀಡಲಿದ್ದಾರೆ.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹಲವು ಜನ ಗಣ್ಯರು ಉಪಸ್ಥಿತರಿರುವರು.


ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಭಕ್ತಿ ಗಾನ ಸುಧೆ ನಡೆಯಲಿದೆ.ರಾತ್ರಿ ಗಂಟೆ 8.00 ಕ್ಕೆ ತುಳು ಯಕ್ಷಗಾನ ಬ್ರಹ್ಮ ಮೊಗೇರೆರ್ ನಡೆಯಲಿದೆ
ಮಾ.14 ರಂದು ಬೆಳಿಗ್ಗೆ ಗಂಟೆ 8.00 ಕ್ಕೆ ಗೊನೆ ಮುಹೂರ್ತ,9.00 ಕ್ಕೆ ಜಾಗದ ಪಂಜುರ್ಲಿಗೆ ತಂಬಿಲ,ಸಂಜೆ ಗಂಟೆ 3.00 ಕ್ಕೆ ಗುಳಿಗ ದೈವದ ಎಣ್ಣೆ ಬೂಳ್ಯ,4.00 ಕ್ಕೆ ಗುಳಿಗ ದೈವದ ನೇಮೋತ್ಸವ 6.00 ಕ್ಕೆ ಶ್ರೀ ಮೊಗೆರ್ಕಳ ದೈವಗಳಿಗೆ ಹಾಗೂ ಕೊರಗಜ್ಜ ದೈವಕ್ಕೆ ಎಣ್ಣೆ ಬೂಳ್ಯ ,ನಂತರ ಮೊಗೇರ್ಕಳ ದೈವಗಳ ಭಂಡಾರ ತೆಗೆಯುವುದು ,ರಾತ್ರಿ ಗಂಟೆ 9.00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 10.00ಕ್ಕೆ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು.ರಾತ್ರಿ ಗಂಟೆ 12.00 ಕ್ಕೆ ಶ್ರೀ ತನ್ನಿಮಾನಿಗ ದೈವವು ಗರಡಿ ಇಳಿಯುವುದು ಹಾಗೂ ಪ್ರಸಾದ ವಿತರಣೆ ನಡೆಯಲಿರುವುದು.


ಮಾ.15 ರಂದು ಬೆಳಿಗ್ಗೆ ಗಂಟೆ 5.00 ಕ್ಕೆ ಶ್ರೀ ಮೊಗೇರ್ಕಳ ದೈವಗಳು ಹಾಲು ಕುಡಿಯುವುದು,ಬೆಳಿಗ್ಗೆ ಗಂಟೆ 7.00 ಕ್ಕೆ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಮತ್ತು ಹರಕೆಯ ನೇಮೋತ್ಸವ ,ಪ್ರಸಾದ ವಿತರಣೆ ನಡೆಯಲಿದೆ.