ಸುಳ್ಯದಿಂದ ಕಲ್ಮಕಾರಿಗೆ ಹೊಸದಾಗಿ ಕೆ.ಎಸ್.ಆರ್ .ಟಿ.ಸಿ ಬಸ್ ಸಂಚಾರ ಮಾ.11 ರಂದು ಆರಂಭಿಸಿದೆ.
ಕಲ್ಮಕಾರಿಗೆ ಬಸ್ ಬಂದ ಮೊದಲ ದಿನ ಸ್ಥಳೀಯರು ಬಸ್ ನ್ನು ಸ್ವಾಗತಿಸಿದರು.
ಪತ್ರಕರ್ತರ ಗ್ರಾಮ ವಾಸ್ತವ್ಯದಲ್ಲಿ ಹೊಸ ರೂಟ್ ಬೇಕೆಂದು ಬಲವಾಗಿ ಆಗ್ರಹ ಕೇಳಿಬಂದಿತ್ತು, ಅಲ್ಲದೆ ಈ ಹಿಂದೆಯೂ ಈ ಬಗ್ಗೆ ಮನವಿ ನೀಡಲಾಗಿತ್ತು. ಈ ಹೊಸ ರೂಟ್ ನ ಬಸ್
ಸುಳ್ಯದಿಂದ ಪೂರ್ವಾಹ್ನ 11.30 ಹೊರಡಲಿದ್ದು ಕಲ್ಮಕಾರು ತಲುಪಿ ಮತ್ತೆ ಕಲ್ಮಕಾರಿನಿಂದ ಅಪರಾಹ್ನ 1.30 ಸುಳ್ಯಕ್ಕೆ ಹೊರಡಲಿದೆ.