ಇಂದು ಮತ್ತು ನಾಳೆ ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೆ

0

ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವ ಇಂದು ಮತ್ತು ನಾಳೆ ನಡೆಯಲಿದೆ.

ಇಂದು ಭಂಡಾರ ಬರುವುದು, ಉಗ್ರಾಣ ತುಂಬಿಸುವುದು, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಪಲ್ಲಕ್ಕಿಯಲ್ಲಿ ಭಂಡಾರ ಬರುವ ಕಾರ್ಯಕ್ರಮ ಗಳು ನಡೆಯಲಿದೆ‌. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 8ರಿಂದ ಸಭಾ ಕಾರ್ಯಕ್ರಮ‌ ನಡೆಯಲಿದೆ. ಬಳಿಕ ಶ್ರೀ ದೇಯಿಬೈದೇತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ಮೂಲಸ್ಥಾನ ಗೆಜ್ಜೆಗಿರಿ ಆಧಾರಿತ ದೈವನೆಲೆ ಧರ್ಮಚಾವಡಿ ಎಂಬ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಲಿದೆ.

ನಾಳೆ ರಾಜ್ಯದೈವ ನೇಮ, ರುದ್ರಚಾಮುಂಡಿ ದೈವದ ನೇಮ, ಪುರುಷ ದೈವದ ನೇಮ, ಅನ್ನಸಂತರ್ಪಣೆ, ಮಧ್ಯಾಹ್ನ ದ ಬಳಿಕ ಶ್ರೀ ಪಂಜುರ್ಲಿ ದೈವ ನೇಮ ನಡೆದು, ಬಳಿಕ ಧ್ವಜಾವರೋಹಣ ನಡೆಯಲಿದೆ.

ಕಂದ್ರಪ್ಪಾಡಿ ಜಾತ್ರೋತ್ಸವದ ಸುದ್ದಿ ಚಾನೆಲ್ ನಲ್ಲಿ ನೇರ ಪ್ರಸಾರವಾಗಲಿದೆ.