ಪಲ್ಲಕ್ಕಿಯಲ್ಲಿ ವಿಜ್ರಂಭಣೆಯಿಂದ ಬಂದ ದೈವಗಳ ಭಂಡಾರ
ಜಾತ್ರೆಯಲ್ಲಿ ಮೆರುಗು ತಂದ ತೆಂಗಿನ ಕಾಯಿ ಕುಟ್ಟುವ ಸಂಪ್ರದಾಯ
ಜನಮನಗೆದ್ದ ಯಕ್ಷಗಾನ ಬಯಲಾಟ
ಇಂದು ಶ್ರೀ ದೈವಗಳಿಗೆ ನೇಮೋತ್ಸವ
ಇತಿಹಾಸ ಪ್ರಸಿದ್ಧ ಕಂದ್ರಪ್ಪಾಡಿ ಜಾತ್ರೋತ್ಸವ ಈ ಬಾರಿಯೂ ಸಾಂಪ್ರದಾಯಿಕ ಆಚರಣೆಗೆ ಸಾಕ್ಷಿಯಾಯಿತು.
ರಾತ್ರಿ ದೈವಗಳ ಭಂಡಾರ ಬರುವುದು, ಉಗ್ರಾಣ ತುಂಬಿಸುವುದು, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಪಲ್ಲಕ್ಕಿ ಯಲ್ಲಿ ಶ್ರೀ ದೈವಗಳ ಬಂಡಾರ ವಿಜ್ರಂಭಣೆಯಿಂದ ತರಲಾಯಿತು.
ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುತ್ತಿರುವ ತೆಂಗಿನ ಕಾಯಿ ಕುಟ್ಟುವ ಪದ್ಧತಿ ಈ ಬಾರಿ ನಡೆದು, ನೂರಾರು ಮಂದಿ ಪಾಲ್ಗೊಂಡರು. ದೂರದ ಊರುಗಳಿಂದಲೂ ಬಂದು ತೆಂಗಿನ ಕಾಯಿ ಕುಟ್ಟವ ಸಂಪ್ರದಾಯದಲ್ಲಿ ತೊಡಗಿಕೊಂಡಿರುವುದು ವಿಶೇಷವಾಗಿತ್ತು.
ರಾತ್ರಿ ಶ್ರೀ ದೇಯಿಬೈದೇತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ ಮೂಲಸ್ಥಾನ ಗೆಜ್ಜೆಗಿರಿ ಆಧಾರಿತ ದೈವನೆಲೆ ಧರ್ಮಚಾವಡಿ ಎಂಬ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಿತು.
ಇಂದು ರಾಜ್ಯದೈವ ನೇಮ, ರುದ್ರಚಾಮುಂಡಿ ದೈವದ ನೇಮ, ಪುರುಷ ದೈವದ ನೇಮ, ಅನ್ನಸಂತರ್ಪಣೆ, ಮಧ್ಯಾಹ್ನ ದ ಬಳಿಕ ಶ್ರೀ ಪಂಜುರ್ಲಿ ದೈವ ನೇಮ ನಡೆದು, ಬಳಿಕ ಧ್ವಜಾವರೋಹಣ ನಡೆಯಲಿದೆ.