ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿ ಬೂಡು – ಬೆಳ್ಳಾರೆ ಶ್ರೀ ಮೊಗೇರ್ಕಳ ದೈವಗಳ ಪ್ರತಿಷ್ಠೆ,
ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಬಾಬು ಯು ಉಪ್ಪಳ ಧರ್ಮದರ್ಶಿಗಳು ಶ್ರೀ ಚೌಡಿ ಚಾಮುಂಡೇಶ್ವರಿ ಆರಾಧಕರು ಶ್ರೀ ಕ್ಷೇತ್ರ ಪಚ್ಲಂಪಾರೆ ಇವರ ನೇತೃತ್ವದಲ್ಲಿ ಕರ್ಮಯೋಗ ಮತ್ತು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮಾ.12 ರಿಂದ ಮಾ.15 ರವರೆಗೆ ನಡೆಯಿತು.
ಮಾ.14 ರಂದು ಬೆಳಿಗ್ಗೆ ಗಂಟೆ 8.00 ಕ್ಕೆ ಗೊನೆ ಮುಹೂರ್ತ ನಂತರ ಜಾಗದ ಪಂಜುರ್ಲಿಗೆ ತಂಬಿಲ ನಡೆಯಿತು.
ಸಂಜೆ ಗುಳಿಗ ದೈವದ ಎಣ್ಣೆ ಬೂಳ್ಯ ನಡೆಯಿತು.
ನಂತರ ಗುಳಿಗ ದೈವದ ನೇಮೋತ್ಸವ, ಶ್ರೀ ಮೊಗೆರ್ಕಳ ದೈವಗಳಿಗೆ ಹಾಗೂ ಕೊರಗಜ್ಜ ದೈವಕ್ಕೆ ಎಣ್ಣೆ ಬೂಳ್ಯ ನಡೆದ ಬಳಿಕ ಮೊಗೇರ್ಕಳ ದೈವಗಳ ಭಂಡಾರ ತೆಗೆಯಲಾಯಿತು.
ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿದು.ರಾತ್ರಿ ಕ್ಕೆ ಶ್ರೀ ತನ್ನಿಮಾನಿಗ ದೈವವು ಗರಡಿ ಇಳಿದು ನಂತರ ಪ್ರಸಾದ ವಿತರಣೆ ನಡೆಯಿತು.
ಮಾ.15 ರಂದು ಬೆಳಿಗ್ಗೆ ಶ್ರೀ ಮೊಗೇರ್ಕಳ ದೈವಗಳು ಹಾಲು ಕುಡಿಯುವುದು,ಬೆಳಿಗ್ಗೆ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ಮತ್ತು ಹರಕೆಯ ನೇಮೋತ್ಸವ ನಡೆಯುತ್ತಿದೆ ಬಳಿಕ ಪ್ರಸಾದ ವಿತರಣೆ ನಡೆಯಲಿದೆ.