ಕೆ ವಿ ಜಿ ಪಾಲಿಟೆಕ್ನಿಕ್: ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘದ ಚಟುವಟಿಕೆಗಳ ಉದ್ಘಾಟನೆ

0

ಸುಳ್ಯದ ಕುರುಂಜಿ ವೆಂಕಟರಮಣಗೌಡ ಪಾಲಿಟೆಕ್ನಿಕ್ ನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಸಂಘ ದ 2023- 24 ನೇ ಸಾಲಿನ ಚಟುವಟಿಕೆಗಳಿಗೆ ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಂ.ಕೆ ಚಾಲನೆ ನೀಡಿದರು.

ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ರವಿಶಂಕರ ಹೊಳ್ಳ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ವಿವೇಕ್ ಪಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಸುನಿಲ್ ಕುಮಾರ್ ಎನ್.ಪಿ , ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಅಸೋಸಿಯೇಷನ್ ಸಲಹೆಗಾರರಾದ ಬಿಂದು ಕೆ.ವಿ, ಸಂಘದ ಅಧ್ಯಕ್ಷ ಜಗತ್ ಬೋಪಣ್ಣ ಕೋಶಾಧಿಕಾರಿ ವೀಕ್ಷಿತ್ ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು . ಕು. ನಿಶ್ಚಿತಾ ಸ್ವಾಗತಿಸಿ , ವೀಕ್ಷಿತ್ ವಂದಿಸಿದರು. ಕು.ದಿಲನ್ ಕಾರ್ಯಕ್ರಮ ನಿರೂಪಿಸಿದರು.