ಮಾ.16- ಮಾ.17 ಕೊಲ್ಲಮೊಗ್ರು ಹರಿಹರ ಪ್ರಾ. ಕೃ. ಪ. ಸ. ಸಂಘದ ಶತಮಾನೋತ್ಸವ ಪ್ರಯುಕ್ತ ಕ್ರೀಡಾಕೂಟ

0

ಕೊಲ್ಲಮೊಗ್ರು ಹರಿಹರ ಪ್ರಾ. ಕೃ. ಪ. ಸ. ಸಂಘದ ಶತಮಾನೋತ್ಸವ ಆಚರಣೆಯ ಪ್ರಯುಕ್ತ ಸಂಘದ ಕಾರ್ಯವ್ಯಾಪ್ತಿಯ ಸದಸ್ಯರುಗಳಿಗೆ ಹಾಗೂ ನವೋದಯ ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಮತ್ತು ಆಡಳಿತ ಮಂಡಳಿ ಸದಸ್ಯರುಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಾ.16 ರಂದು ಹಾಗೂ ಸುಳ್ಯ ತಾಲೂಕು ಹಾಗೂ ಕಡಬ ತಾಲೂಕಿನ ಆಹ್ವಾನಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳಿಗೆ ಮತ್ತು ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರಿಗೆ ಹಾಗೂ ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘದ ನವೋದಯ ಸಂಘಗಳಿಗೆ ಮಾ.17 ರಂದು ಬೆಟ್ಟುಮುಕ್ಕಿ ಕ್ರೀಡಾಂಗಣ, ಬಾಳುಗೋಡು ಇಲ್ಲಿ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಕೂಟವನ್ನು ಡಾ. ಚಂದ್ರಶೇಖರ ಕಿರಿಭಾಗ ಉದ್ಘಾಟಿಸಲಿದ್ದಾರೆ. ಪದ್ಮಯ್ಯ ಮಾಸ್ಟರ್ ಕೂಜುಗೋಡು ಕಟ್ಟೆಮನೆ ಧ್ವಜಾರೋಹಣ ಮಾಡಲಿದ್ದಾರೆ. ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಹರ್ಷಕುಮಾರ್ ದೇವಜನ ಅಧ್ಯಕ್ಷತೆ ವಹಿಸಿದ್ದಾರೆ.

ಮಾ.16 ರಂದು ಸಂಘದ ಸದಸ್ಯರುಗಳಿಗೆ ಪುರುಷರಿಗೆ ವಾಲಿವಾಲ್, ಸೀಮಿತ ಓವರಿನ ಕ್ರಿಕೆಟ್, ಹಗ್ಗ ಜಗ್ಗಾಟ, 100 ಮೀ ಓಟ, ಗುಂಡು ಎಸೆತ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ, ಹಗ್ಗ ಜಗ್ಗಾಟ, 100 ಮೀ‌ ನಡಿಗೆ, ಗುಂಡು ಎಸೆತ ನಡೆಯಲಿದೆ.

ಸಂಘದ ಸದಸ್ಯರಾಗಿದ್ದು 60 ರಿಂದ 70 ವರ್ಷ ಮೇಲ್ಪಟ್ಟವರಿಗೆ
ಪುರುಷರಿಗೆ ಗುಂಡೆಸೆತ, 200 ಮೀ.ನಡಿಗೆ, ಹಾರ್ಡ್ ಬಾಲ್ ಎಸೆಯುವುದು ನಡೆದರೆ ಮಹಿಳೆಯರಿಗೆ . ಮಹಿಳೆಯರಿಗೆ ಗುಂಡೆಸೆತ, 200 ಮೀ ನಡಿಗೆ, ಹಾರ್ಡ್ ಬಾಲ್ ಎಸೆಯುವುದು ನಡೆಯಲಿದೆ.

70 ವರ್ಷ ಮೇಲ್ಪಟ್ಟವರಿಗೆ
ಪುರುಷರಿಗೆ ಗುಂಡೆಸೆತ, 200 ಮೀ.ನಡಿಗೆ, ಹಾರ್ಡ್ ಬಾಲ್ ಎಸೆಯುವುದು ನಡೆದರೆ ಮಹಿಳೆಯರಿಗೆ . ಮಹಿಳೆಯರಿಗೆ ಗುಂಡೆಸೆತ, 200 ಮೀ ನಡಿಗೆ, ಹಾರ್ಡ್ ಬಾಲ್ ಎಸೆಯುವುದು ನಡೆಯಲಿದೆ.

ಸಂಘದ ವ್ಯಾಪ್ತಿಯ ನವೋದಯ ಸಂಘದ ಸದಸ್ಯ ಪುರುಷರಿಗೆ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಪಂದ್ಯ ನಡೆಯಲಿದೆ.
ಸಂಘದ ವ್ಯಾಪ್ತಿಯ ನವೋದಯ ಸಂಘದ ಸದಸ್ಯ ಪುರುಷರಿಗೆ ಹಾಗೂ ಮಹಿಳೆಯರಿಗೆ ಹಗ್ಗ ಜಗ್ಗಾಟ ಪಂದ್ಯ ನಡೆಯಲಿದೆ.
ಸಿಬ್ಬಂದಿಗಳಿಗೆ ಮತ್ತು ಆಡಳಿತ ಮಂಡಳಿಯವರಿಗೆ ಹಗ್ಗ ಜಗ್ಗಾಟ ಹಾಗೂ ಲಕ್ಕಿ ಗೇಮ್‌ ನಡೆಯಲಿದೆ. ಸಂಘದ ವ್ಯಾಪ್ತಿಯ ಸಾರ್ವಜನಿಕ ಪುರುಷರಿಗೆ ಮತ್ತು ಮಹಿಳೆಯರಿಗೆ ಜಾನಪದ ಗೀತೆ, ನೇಜಿ ಪಾಡ್ಡನ, ಸೋಬಾನೆ ಹಾಡು, ದೇಶಭಕ್ತಿ ಗೀತೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಮಾ.17 ರಂದು
ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘದ ಪುರುಷ ಮತ್ತು ಮಹಿಳಾ ಸದಸ್ಯರಿಗೆ ಹಗ್ಗ ಜಗ್ಗಾಟ, ಲಕ್ಕಿ ಗೇಮ್ ನಡೆಯಲಿದೆ.
ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘದ ನವೋದಯ ಸಂಘಗಳಿಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ನಡೆಯಲಿದೆ.
ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪುರುಷರಿಗೆ ಸೀಮಿತ ಓವರಿನ ಕ್ರಿಕೆಟ್ ಪಂದ್ಯಾಟ, ಹಗ್ಗ ಜಗ್ಗಾಟ, ಮಹಿಳೆಯರಿಗೆ ಸಂಗೀತ ಕುರ್ಚಿ, ಲಕ್ಕಿ ಗೇಮ್ ನಡೆಯಲಿದೆ.