ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ) ವತಿಯಿಂದ 6 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು
ಮಾ.17ರಂದು ಪಂಜ ದೇವಳದಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ಜರುಗಿತು .
ಮುಂಜಾನೆ ಸಾಂಕೇತಿಕವಾಗಿ ಹಿರಿಯ ಕ್ರಿಕೆಟ್ ಆಟಗಾರ ಪುರುಷೋತ್ತಮ ನಾಗತೀರ್ಥ ಮತ್ತು ಚಂದ್ರ ಸೌಂಡ್ಸ್ ಪಂಜ ಇದರ ಮಾಲಕರದ ಚಂದ್ರ ಪಲ್ಲೋಡಿ ಪಂದ್ಯಾ ಕೂಟಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ
ಪವನ್ ಪಲ್ಲತ್ತಡ್ಕ ಅಧ್ಯಕ್ಷತೆ ವಹಿಸಿದ್ದರು.
ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಉದ್ಘಾಟಿಸಿ ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ , ಪಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ಹಾಗೂ ಪಂದ್ಯಾಟದ ಸಂಚಾಲಕ ಹಿತೇಶ್ , ಕ್ರೀಡಾ ಕಾರ್ಯದರ್ಶಿ ಸತೀಶ್ ಕೆರೆಯಡ್ಕ ಮತ್ತು ಆರು ತಂಡದ ಮಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೆ ಸಮಾರೋಪ ಸಮಾರಂಭದಲ್ಲಿ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ
ಪವನ್ ಪಲ್ಲತ್ತಡ್ಕ ಅಧ್ಯಕ್ಷತೆ ವಹಿಸಿದ್ದರು.
ಬಹುಮಾನ ವಿತರಕರಾಗಿ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ
ಚಂದ್ರಶೇಖರ್ ಕರಿಮಜಲು ಉಪಸ್ಥಿತರಿದ್ದರು.
ಫಲಿತಾಂಶ:
ಪಂದ್ಯಾಕೂಟದ ಪ್ರಥಮ ಸ್ಥಾನವನ್ನು ರಂಜಿತ್ ಜಬಳೆ ಮಾಲಕತ್ವದ ಶ್ರೀ ವಿಷ್ಣು ಸ್ಟ್ರೈಕರ್ಸ್, ದ್ವಿತೀಯ ಸ್ಥಾನವನ್ನು ಭರತ್ ಕೊಟ್ರಂಜ ಮಾಲಕತ್ವದ ಕಲರ್ಸ್ ಈಗಲ್ಸ್, ತೃತೀಯ ಸ್ಥಾನವನ್ನು ಯುವಶಕ್ತಿ ಗೆಳೆಯರ ಬಳಗ ಪೊಳಂಜ ಮಾಲಕತ್ವದ ಯುವಶಕ್ತಿ ಗೆಳೆಯರ ಬಳಗ ಮತ್ತು ಚತುರ್ಥ ಸ್ಥಾನವನ್ನು ಉಳ್ಳಾಕುಲು ಕಲಾರಂಗ ಪಲ್ಲೋಡಿ ಮಾಲಕತ್ವದ ಯು ಕೆ ಪಿ ಪಲ್ಲೋಡಿ ತಂಡ ಪಡೆದಿರುತ್ತದೆ. ವೈಯಕ್ತಿಕ ಬಹುಮಾನವನ್ನು ಬೆಸ್ಟ್ ಫೀಲ್ಡರ್ ಸುಬ್ರಮಣ್ಯ ಶರ್ಮ, ಬೆಸ್ಟ್ ಬ್ಯಾಟ್ಸ್‌ಮನ್ ಹೈದೆರ್ ಬೆಳ್ಳಾರೆ, ಬೆಸ್ಟ್ ಬೌಲರ್ ಕಾರ್ತಿಕ್ ಹರಿಹರ, ಎಮರ್ಜಿಂಗ್ ಪ್ಲೇಯರ್ ಆಫ್ ದ ಟೂರ್ನಮೆಂಟ್ ಹಿತೇಶ್ ನಿಂತಿಕಲ್ಲು, ಗೇಮ್ ಚೇಂಜರ್ ಆಫ್ ದಿ ಟೂರ್ನಮೆಂಟ್ ರಂಜಿತ್, ಮ್ಯಾನ್ ಆಫ್ ಮ್ಯಾಚ್ ಫೈನಲ್ ಮೋಹಿತ್ ಕೊಲ್ಲಮೊಗ್ರ, ಬೆಸ್ಟ್ ಕೀಪರ್ ಭವನ್ ಕರಿಕ್ಕಳ, ಲೆಜೆಂಡ್ ಪ್ಲೇಯರ್ ಯತೀಂದ್ರ ಸುಳ್ಯ, ಹಾಗೂ ಮ್ಯಾನ್ ಆಫ್ ದಿ ಸೀರೀಸ್ ರೋಹಿತ್ ಕೊಲ್ಲಮೊಗ್ರ ಪಡೆದರು.
ಕಾರ್ಯಕ್ರಮದಲ್ಲಿ ಚೇತನ್ ಜಳಕದಹೊಳೆ ನಿರೂಪಿಸಿದರು, ಸಂದೀಪ್ ಪಲ್ಲೋಡಿ ಸ್ವಾಗತಿಸಿದರು ಶರತ್ ಕುದ್ವ ವಂದಿಸಿದರು.