ಚುನಾವಣಾ ಆಯೋಗವು ಲೋಕಸಭಾ ಚುನಾವಣೆ 2024 ನ್ನು ಘೋಷಿಸಿದ್ದು, ಚುನಾವಣೆ ಸಂದರ್ಭದಲ್ಲಿ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷರಾತವಾಗಿ ಚುನಾವಣೆ ನಡೆಸುವುದನ್ನು ಖಾತರಿಪಡಿಸಲು ಚುನಾವಣಾ ಆಯೋಗವು ಹಲವಾರು ಮಾರ್ಗಸೂಚಿ ಮತ್ತು ಆದೇಶಗಳನ್ನು ಹೊರಡಿಸಿದ್ದು ಪರವಾನಿಗೆ ಪಡೆದು ಶಸ್ತ್ರಾಸ್ತ್ರ ಹೊಂದಿರುವಂತಹ ಎಲ್ಲಾ ಆಯುಧ ಪರವಾನಿಗೆದಾರರಿಗೆ ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿ (ನಮೂನೆ 8) ಗಳಲ್ಲಿ ಠೇವಣಿ ಇಡುವಂತೆ ಆದೇಶವನ್ನು ಹೊರಡಿಸಲಾಗಿರುತ್ತದೆ.
ಪರದಾನಿಗೆದಾರರು ಶಸ್ತ್ರಾಸ್ತ್ರ ಠೇವಣಿ ಇಡುವುದರಿಂದ ವಿನಾಯಿತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾ ಮಟ್ಟದ ಸ್ಟ್ರೀನಿಂಗ್ ಸಮಿತಿ ಸಭೆಯನ್ನು ಮಾ.18 ರಂದು ಜಿಲ್ಲಾಧಿಕಾರಿಯವರ ನ್ಯಾಯಾಲಯದ ಕೊಠಡಿಯಲ್ಲಿ ಅಪರಾಹ್ನ 12.30 ಗಂಟೆಗೆ ಕರೆಯಲಾಗಿದೆ.