ಸೋಣಂಗೇರಿ: ಬೇಂಗಮಲೆ – ಚೊಕ್ಕಾಡಿ ರಸ್ತೆ ಅಗಲೀಕರಣ ಕಾಮಗಾರಿ- ಡಾಮರೀಕರಣಕ್ಕೆ ಅಡ್ಡಿಯಾಗಿರುವ ಮರಗಳ ತೆರವು ಕಾರ್ಯ

0

ಅರಣ್ಯ ಇಲಾಖೆಯ ವತಿಯಿಂದ ಶೀಘ್ರವಾಗಿ ಮರಗಳ ತೆರವಿಗೆ ಗ್ರಾಮಸ್ಥರ ಒತ್ತಾಯ

ಸೋಣಂಗೇರಿ – ಬೇಂಗಮಲೆ ಚೊಕ್ಕಾಡಿ ರಸ್ತೆ ಅಗಲೀಕರಣ ಕಾಮಗಾರಿ ಪೂರ್ತಿಗೊಂಡಿದ್ದು, ಡಾಮರೀಕರಣ ಕಾಮಗಾರಿ ಬಾಕಿ ಉಳಿದಿದೆ. ಆದರೆ ಅರಣ್ಯ ಇಲಾಖೆಯು ರಸ್ತೆ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸದೇ, ಅಡ್ಡಿಯಾಗಿದ್ದು, ಚರಂಡಿಗಳಲ್ಲೇ ರಸ್ತೆ ನಿರ್ಮಿಸಿ ಡಾಮರೀಕರಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಶೀಘ್ರವಾಗಿ ಅರಣ್ಯ ಇಲಾಖೆಯ ವತಿಯಿಂದ ಮರಗಳನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ರಸ್ತೆಯ ಅಭಿವೃದ್ಧಿಗೆ ಈ ಹಿಂದಿನ ಶಾಸಕರಾಗಿದ್ದ ಎಸ್.ಅಂಗಾರರವರು ಎರಡು ಕೋಟಿ ಅನುದಾನ ತರಿಸಿದ್ದರು. ಆದರೆ ರಸ್ತೆಯ ಬದಿಯಲ್ಲಿರುವ ಮರಗಳ ತೆರವು ಕಾರ್ಯ ಕೂಡಲೇ ಆಗಬೇಕಾಗಿದೆ. ರಸ್ತೆ ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆಯವರು ರಸ್ತೆ ಬದಿಯ ಮರ ತೆರವುಗೊಳಿಸಲು ಅನುಮತಿ ನೀಡಬೇಕಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಮರಗಳನ್ನು ತೆರವುಗೊಳಿಸಿ ರಸ್ತೆ ಅಭಿವೃದ್ದಿಯಾಗಲು ಸಹಕರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.