ಹಿಂದೂ ಸಂಸ್ಕೃತಿ, ಆಚಾರ ವಿಚಾರಗಳಿಂದ ಭಾರತ ಬೆಳಗುತಿದೆ; ಡಾ.ರವೀಶ್ ಪಡುಮಲೆ
ದೈವ ದೇವರುಗಳ ಆರಾಧನೆಯಿಂದ ಸಮಾಜದಲ್ಲಿ ಪರಿವರ್ತನೆ; ಎಸ್.ಅಂಗಾರ
ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ಮಾ. 19 ರಂದು ರಾತ್ರಿ ನಡೆಯಿತು ಧಾರ್ಮಿಕ ಸಭೆಯನ್ನು ಮಾಜಿ ಬಂದರು ಮತ್ತು ಮೀನುಗಾರಿಕಾ ಸಚಿವರಾದ ಎಸ್ ಅಂಗಾರ ಉದ್ಘಾಟಿಸಿ, ಮಾತನಾಡಿ ದೈವ ದೇವರುಗಳ ಆಲಯವನ್ನು ಕಟ್ಟಿಸಲು ನಮಗೆ ಯೋಗ ಬೇಕು.ಸಮಾಜದ ಪರಿವರ್ತನೆಯಲ್ಲಿ ದೈವ ದೇವರುಗಳ ನಂಬಿಕೆಯ ಪಾತ್ರ ಮಹತ್ವದ್ದಾಗಿರುತ್ತದೆ. ಎಂದು ಹೇಳಿದರು. ದಿಕ್ಸೂಚಿ ಭಾಷಣವನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕರಾದ ಡಾ. ರವೀಶ್ ಪಡುಮಲೆ ಅವರು ಮಾಡಿದರು ಅವರು ಮಾತನಾಡಿ ಹಿಂದೂ ಸಂಸ್ಕೃತಿ ಆಚಾರ ವಿಚಾರಗಳಿಂದ ಭಾರತ ಬೆಳಗುತಿದೆ. ಭಾರತ ವಿಶ್ವ ಬಂಧುವಾಗಿದೆ. ಆದರೆ ಜಾತಿ ವ್ಯವಸ್ಥೆಯನ್ನು ಇಟ್ಟುಕೊಂಡು ನಮ್ಮ ನಮ್ಮ ನಡುವೆ ಭಿನ್ನಾಭಿಪ್ರಾಯ ಬಿಂಬಿಸುವ ಕೆಲಸವನ್ನು ದುಷ್ಟ ಶಕ್ತಿಗಳು ಮಾಡುತ್ತಿದ್ದಾರೆ .ಅವರನ್ನು ಸಮಾಜದಿಂದ ದೂರವಿಡಬೇಕು. ಹಿಂದೂ ಸಮಾಜದಿಂದ ದಲಿತ ಸಮುದಾಯವನ್ನು ಹೊರಗಿಡುವ ಕೆಲಸ ಮಾಡುವ ಶಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕು. ಭಾರತದ ಪವಿತ್ರ ಸಂವಿಧಾನದ ಅಡಿಯಲ್ಲಿ ಹಿಂದೂ ಸಮಾಜ ಒಂದಾಗಿ ಬಾಳಬೇಕು ಎಂದ ಅವರು ದೈವರಾಧನೆಯೇ ನಮ್ಮ ಜೀವನ ಪದ್ಧತಿ ಎಂದು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಉಮೇಶ್ ಪಿ.ಕೆ. ವಹಿಸಿದ್ದರು.
ಈ ಸಂದರ್ಭದಲ್ಲಿ ಭಾರತೀಯ ಸೇನೆಯ ನಿವೃತ್ತ ಸೈನಿಕ ವಿದ್ಯಾಧರ ಎನ್.ಪಟ್ಟೆಯವರನ್ನು ಸನ್ಮಾನಿಸಲಾಯಿತು
ವೇದಿಕೆಯಲ್ಲಿ ದೈವಸ್ಥಾನದ ಅನುವಂಶಿಕ ಮೊಕ್ತೇಸರರಾದ ರಾಘವೇಂದ್ರ ಭಟ್ ಕಲ್ದಂಬೆ, ಅಧ್ಯಕ್ಷ ಸುಂದರ ರಾವ್, ಗೌರವಾಧ್ಯಕ್ಷ ದಯಾನಂದ ಸಾಲಿಯಾನ್ ಮೂಡೆಕಲ್ಲು, ಕಾರ್ಯದರ್ಶಿ ಕುಶಾಲಪ್ಪ ಗೌಡ ಕಜೆ, ಮಹಿಳಾ ಸಮಿತಿ ಅಧ್ಯಕ್ಷೆ ಪ್ರಭಾವತಿ ರೈ, ಕಾರ್ಯದರ್ಶಿ ಪ್ರೇಮಲತಾ ಗೋಪಾಲ್ ಮಣಿಯಾಣಿ, ಯೋಧ ಸುಬೇದಾರ್ ರಾಜೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಕಿ ಯತೀಶ್ ರೈ ದುಗ್ಗಲಡ್ಕ ಸ್ವಾಗತಿಸಿ, ಶೇಖರ್ ಕುದ್ಪಾಜೆ ಸನ್ಮಾನ ಪತ್ರ ವಾಚಿಸಿದರು. ಶ್ರೀಮತಿ ಶೈಲಜ ನೀರಬಿದಿರೆ ವಂದಿಸಿದರು ವಿಖ್ಯಾತ್ ಬಾರ್ಪಣೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶ್ರೀ ರುಧಿರ ಚಾಮುಂಡಿ ನೇಮೋತ್ಸವ ನಡೆಯಿತು.