ಸುಳ್ಯ ಸ್ನೇಹ ವಿದ್ಯಾಸಂಸ್ಥೆಗೆ ಬಿ.ಇ.ಒ. ರಮೇಶ್ ಬಿ. ಇ. ಭೇಟಿ
“ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯು ಶಾಂತಿನಿಕೇತನದಂತಹ ಮಾದರಿ ಶಾಲೆಯಾಗಿದೆ. ಇಲ್ಲಿ ಪರಿಸರದ ನಡುವೆ ಕಲಿಕೆ ಸಾಗುತ್ತಿರುವುದು ನಿಜವಾದ ಕಲಿಕೆಯನ್ನು ತಿಳಿಸುತ್ತದೆ. ‘ನಲಿಯುತ್ತಾ ಕಲಿ’ ಮತ್ತು ‘ಕಲಿಯುತ್ತ ನಲಿ’ ಎಂಬ ತತ್ವಗಳಿಗೆ ಪೂರಕವಾದ ಪರಿಸರವನ್ನು ಒಳಗೊಂಡಿರುವ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಪುಟಾಣಿಗಳು ನಲಿಯುತ್ತಾ ಕಲಿಯುತ್ತಿರುವುದು ನೋಡಲು ಖುಷಿಯಾಗುತ್ತಿದೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವ ಪುಟಾಣಿಗಳು ಧನ್ಯರು. ಈ ಶಿಕ್ಷಣ ವ್ಯವಸ್ಥೆಯು ಶ್ರೇಷ್ಠ ಶಿಕ್ಷಣ ತಜ್ಞ ಮತ್ತು ರಾಜ್ಯಶಾಸ್ತ್ರಜ್ಞನಾಗಿರುವ ರುಸ್ಸೋರವರ ಚಿಂತನೆಯ ಪ್ರತೀಕದಂತಿದೆ” ಎಂದು ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ರಮೇಶ್ ಬಿ ಇ ಇವರು ಮಾ.19ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ, ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.