ಜಾಲ್ಸೂರು ಗ್ರಾಮದ ಕುಕ್ಕಂದೂರು ನಿವಾಸಿ ಶಿಲ್ಪಿ ಗಂಗಾಧರ ಆಚಾರ್ಯ ರವರ ಪತ್ನಿ ಶ್ರೀಮತಿ ವಾರಿಜಾ ಆಚಾರ್ಯ ರವರು ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಮಾ.19 ರಂದು ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಹಾಗೂ ಇಬ್ಬರು ಪುತ್ರರಾದ ವಿಶ್ವನಾಥ ಆಚಾರ್ಯ ಕುಕ್ಕಂದೂರು, ವಿಜೇತ್ ಆಚಾರ್ಯ ಕುಕ್ಕಂದೂರು, ಪುತ್ರಿ ಕು. ವಿನುತಾ , ಸೊಸೆ ಶ್ರೀಮತಿ ಸರೋಜ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.