ಅರಂತೋಡು ಗ್ರಾಮದ ಅಡ್ತಲೆ -ಬೆದ್ರುಪಣೆ ಉಳ್ಳಾಕುಲು ಹಾಗೂ ಮಲೆ ದೈವಗಳ ವಾರ್ಷಿಕ ನಡಾವಳಿಯು ಮಾ. 21ರಂದು ಅಡ್ತಲೆ ಮೂಲ ಉಳ್ಳಾಕುಲು ದೈವಸ್ಥಾನದಿಂದ ಕೀಲಾರು ಭಂಡಾರ ತೆಗೆದುಕೊಂಡು ಹೋಗಿ ಬೆದ್ರುಪಣೆ ಉಳ್ಳಾಕುಲ ದೈವಸ್ಥಾನದಲ್ಲಿ ಮಾರ್ಚ್ 22ರಂದು ನಡೆಯಿತು.
ನಡಾವಳಿಯಲ್ಲಿ ನಾಲ್ಕು ಕಂಬದ ನಾಲ್ಕು ಪೂಜಾರಿಗಳು, ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು, ಸಮಿತಿಯ ಸದಸ್ಯರು, ಅಡ್ತಲೆ ಭಂಡಾರ ಮನೆಯವರು, ಅಡ್ತಲೆ -ಬೆದ್ರುಪಣೆ ಹತ್ತು ಕುಟುಂಬದ ಸಮಸ್ತರು, ಊರ, ಪರ ಊರ ಭಕ್ತಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.