ಸಾಲ ಮರುಪಾವತಿಗಾಗಿ ನೀಡಿದ ಚೆಕ್ ಅಮಾನ್ಯಗೊಂಡು ಆರೋಪಿಗೆ ಜಾಮೀನು ರಹಿತ ಬಂಧನ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಪೋಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದ ಘಟನೆ ವರದಿಯಾಗಿದೆ.
ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ ಶಾಖೆಯಿಂದ ಗಣೇಶ್ ಹೆಚ್. ಎಂಬವರು ಸಾಲ ಪಡಕೊಂಡಿದ್ದು, ಸದ್ರಿ ಸಾಲದ ಮರುಪಾವತಿಗಾಗಿ ಆರೋಪಿ ಗಣೇಶ್ ಹೆಚ್. ರವರು ನೀಡಿದ ಚೆಕ್ ಅಮಾನ್ಯಗೊಂಡಿದ್ದು, ನಂತರ ಅಮಾನ್ಯಗೊಂಡ ಚೆಕ್ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತುಜೆ.ಎಂ.ಎಫ್.ಸಿ.ನ್ಯಾಯಾಲಯಸುಳ್ಯದಲ್ಲಿ ಪ್ರಕರಣ ದಾಖಲುಗೊಂಡು ಆರೋಪಿಗೆ ಶಿಕ್ಷೆಯಾಗಿತ್ತು. ನಂತರ ಆರೋಪಿಯು ಸದ್ರಿ ಶಿಕ್ಷೆಯ ವಿರುದ್ಧ ಮಾನ್ಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳೂರು, ಪುತ್ತೂರು ನ್ಯಾಯಾಲಯದ ಮುಂದೆ ಅಪೀಲು ಸಲ್ಲಿಸಿ, ಸದ್ರಿ ಅಪೀಲು ವಜಾಗೊಂಡು ಆರೋಪಿಗೆ ಜಾಮೀನು ರಹಿತ ಬಂಧನ ಆದೇಶ ಆಗಿರುತ್ತದೆ. ಆ ಪ್ರಕಾರ ಸುಳ್ಯ ಪೋಲಿಸರು ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ಹಿರಿಯ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ.ನ್ಯಾಯಾಲಯ, ಸುಳ್ಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಘಟನೆ ವರದಿಯಾಗಿದೆ.
ಪ್ರಕರಣದ ಪಿರ್ಯಾಧಿದಾರ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಸುಳ್ಯ ಶಾಖೆಯ ಪರ ನ್ಯಾಯವಾದಿಗಳಾದ ಕೃಷ್ಣಮೂರ್ತಿ ಕೊಡೆಂಕಿರಿ ಮತ್ತು ಮನೋಜ್ ಬಿ. ರವರು ವಾದಿಸಿರುತ್ತಾರೆ.