ಐವರ್ನಾಡು ದೇರಾಜೆ ರಸ್ತೆ ಕಾಂಕ್ರೀಟೀರಕಣಕ್ಕಾಗಿ ರಸ್ತೆ ಅಗೆದು ಸ್ಥಗಿತಗೊಂಡಿದ್ದ ಕಾಮಗಾರಿ ಮತ್ತೆ ಪ್ರಾರಂಭಗೊಂಡಿದೆ.
ಅಗೆದ ರಸ್ತೆಗೆ ಜಲ್ಲಿ ಹಾಕಿ ಬುಲ್ಡೋಜರ್ ಮೂಲಕ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ.
ಬಳಿಕ ಕಾಂಕ್ರೀಟೀಕರಣ ಕಾಮಗಾರಿ ನಡೆಲಿದೆ.
ರಸ್ತೆ ಅಗೆದು ಹಾಕಿ ಕೆಲವು ದಿನಗಳಾಗಿದ್ದು ಕೆಲಸ ಪ್ರಾರಂಭಮಾಡದೇ ಇದ್ದದುದರಿಂದ ಐವರ್ನಾಡಿನ ನಾಗರಿಕ ಸೇವಾ ಸಮಿತಿಯವರು ಗ್ರಾಮ ಪಂಚಾಯತ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಮನವಿಯಲ್ಲಿ ರಸ್ತೆ ಅಗೆದು ಹಾಕಿ ಕಾಮಗಾರಿ ನಡೆಸದೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.ಕೂಡಲೇ ಕಾಮಗಾರಿ ನಡೆಸುವಂತೆ ಕ್ರಮಕೈಗೊಳ್ಳಬೇಕು ಎಂದು ವಿನಂತಿಸಲಾಗಿತ್ತು.
ಈ ಬಗ್ಗೆ ಕಾಂಟ್ರಾಕ್ಟರ್ ಜೊತೆ ವಿಚಾರಿಸಿದಾಗ ಎರಡು ಮೂರು ದಿನದಲ್ಲಿ ಕಾಮಗಾರಿ ಪ್ರಾರಂಭಮಾಡುವುದಾಗಿ ಪತ್ರಿಕೆಯ ವರದಿಗಾರರ ಜೊತೆ ತಿಳಿಸಿದ್ದರು ಅದರಂತೆ ಕಾಂಟ್ರಾಕ್ಟರ್ ಕೆಲಸ ಪ್ರಾರಂಭ ಮಾಡಿದ್ದು ಈಗ ಕಾಮಗಾರಿ ಪ್ರಗತಿಯಲ್ಲಿದೆ.
ಸರಕಾರದ ಅನುದಾನ ಮಳೆಹಾನಿ ಯೋಜನೆಯಲ್ಲಿ ರೂ.25 ಲಕ್ಷ ಮತ್ತು ಶಾಸಕರ ಅನುದಾನ 10 ಲಕ್ಷ ಅನುದಾನದಲ್ಲಿ ರಸ್ತೆ ಕಾಂಕ್ರೀಟೀಕರಣವಾಗಲಿದ್ದು
ನಿರ್ಮಿತಿ ಕೇಂದ್ರದ ಮೂಲಕ ಕೆಲಸ ನಡೆಯುತ್ತದೆ ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ತಿಳಿಸಿದ್ದಾರೆ.