ಕನಕಮಜಲು: ಡಿ.ಸಿ. ಮನ್ನಾ ಜಾಗವನ್ನು ಅಂಬೇಡ್ಕರ್ ಭವನಕ್ಕೆ ನೀಡದೆ ಸಾಮಾಜಿಕ ಅರಣ್ಯಕ್ಕೆ ಮೀಸಲಿಟ್ಟ ಹಿನ್ನೆಲೆ

0

ಮೊಗೇರ ಗ್ರಾಮಸಮಿತಿಯ ವತಿಯಿಂದ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಕನಕಮಜಲು ಗ್ರಾಮದ ನೆಡಿಲು ಎಂಬಲ್ಲಿ ಡಿ.ಸಿ. ಮನ್ನಾ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನೀಡದೇ, ಸಾಮಾಜಿಕ ಅರಣ್ಯಕ್ಕೆ ಮೀಸಲಿರಿಸಿರುವುದನ್ನು ವಿರೋಧಿಸಿ
ಕನಕಮಜಲು ಮುಗೇರ ಗ್ರಾಮ ಸಮಿತಿ ವತಿಯಿಂದ ಚುನಾವಣಾ ಬಹಿಷ್ಕಾರ ಮಾಡಲು ತೀರ್ಮಾನಿಸಿ, ನೆಡಿಲಿನಲ್ಲಿ ಮಾ.24ರಂದು ಬೆಳಿಗ್ಗೆ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವುದಾಗಿ ತಿಳಿದುಬಂದಿದೆ.

ನೆಡಿಲಿನಲ್ಲಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಸುಮಾರು ನಲವತ್ತಕ್ಕೂ ಅಧಿಕ ಮನೆಗಳಿದ್ದು, ಇಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಡಿ.ಸಿ. ಮನ್ನಾ ಭೂಮಿಯನ್ನು ಕೇಳಿದ್ದು, ಆದರೆ ಸರ್ಕಾರ ಅದನ್ನು ಅಂಬೇಡ್ಕರ್ ಭವನಕ್ಕೆ ನೀಡದೇ, ಸಾಮಾಜಿಕ ಅರಣ್ಯಕ್ಕೆ ಮೀಸಲಿರಿಸಿದ ಕಾರಣದಿಂದ ಬೇಸತ್ತು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿದ್ದು,
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ಒದಗಿಸಿದ ನಂತರವೇ ಚುನಾವಣಾ ಬಹಿಷ್ಕಾರ ನಿರ್ಧಾರವನ್ನು ಬದಲಿಸುತ್ತೇವೆ ಎಂದು ಕನಕಮಜಲು ಮೊಗೇರ ಗ್ರಾಮ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.