ಶ್ರೀಮತಿ ಲಲಿತಾ ಚಿಲ್ಪಾರು ರವರ ವೈಕುಂಠ ಸಮಾರಾಧನಾ ಕಾರ್ಯಕ್ರಮ

0

ಅಮರಮುಡ್ನೂರು ಗ್ರಾಮದ ಚಿಲ್ಪಾರು ದಿ.ದಾಮೋದರ ಗೌಡ ರವರ ಪತ್ನಿ ಶ್ರೀಮತಿ ಲಲಿತಾ ರವರು ಫೆ.21 ರಂದು ನಿಧನರಾಗಿದ್ದು ಮೃತರ ವೈಕುಂಠ ಸಮಾರಾಧನೆಯು ಚಿಲ್ಪಾರು ಮನೆಯಲ್ಲಿ ಮಾ.24 ರಂದು ನಡೆಯಿತು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಬಾಲಚಂದ್ರ ಚಿಲ್ಪಾರು ಪ್ರಾಸ್ತಾವಿಕ ಮಾತಿನೊಂದಿಗೆ ನುಡಿ ನಮನ ಸಲ್ಲಿಸಿದರು. ನಿವೃತ್ತ ಶಿಕ್ಷಕ ಸುಂದರ ಗೌಡ ರವರು ಮೃತರ ಜೀವನಗಾಥೆಯ ಕುರಿತು ಗುಣಗಾನ ಮಾಡಿದರು.

ಮೃತರ ಪುತ್ರ ಜಯದೀಪ್ ಚಿಲ್ಪಾರು, ಪುತ್ರಿಯರಾದ ಶ್ರೀಮತಿ ವಾರಿಜಾಕ್ಷಿ, ಶ್ರೀಮತಿ ಶಾರದಾ, ಶ್ರೀಮತಿ ವಿಶಾಲಾಕ್ಷಿ, ಶ್ರೀಮತಿ ಪ್ರೇಮಲತಾ, ಅಳಿಯಂದಿರಾದ ಪದ್ಮನಾಭ ದೇವಸ್ಯ, ಗಂಗಾಧರ ಮಲ್ಲಾರ, ಸುಂದರ ಗೌಡ ಕೋಡಿಂಬಾಳ, ಸೊಸೆ ಶ್ರೀಮತಿ ಲತಾ ಹಾಗೂ ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಬಂಧು ಮಿತ್ರರು ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಕೋರಿದರು.