ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಸುಳ್ಯ ತಾಲೂಕಿನ ವಿಕಲಚೇತನರಿಗೆ ವಿಶೇಷ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ಮಾ. 26 ರಂದು ನಡೆಯಿತು.
ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಪ್ರವೀಣ್ ನಾಯಕ್, ಜಾಲ್ಸುರು ವಿ.ಅರ್.ಡಬ್ಲ್ಯೂ ಸದಾನಂದ, ಮಂಡೆಕೋಲು ವಿ ಅರ್ ಡಬ್ಲ್ಯೂ ಸವಿತ, ಮುರುಳ್ಯ ವಿಅರ್ ಡಬ್ಲ್ಯೂ ರಂಜಿನಿ, ಕನಕಮಜಲು ವಿ.ಅರ್ ಡಬ್ಲ್ಯೂ ವೆಂಕಟ್ರಮಣ, ಅಜ್ಜಾವರ ವಿ ರ್ ಡಬ್ಲ್ಯೂ ಉಮ್ಮರ್ ಮರ್ಕಂಜ ವಿ.ಅರ್ ಡಬ್ಲ್ಯೂ ಷಣ್ಮುಖ, ದಾದಿ ನಯನ ಹಾಜರಿದ್ದರು.ವೈಧ್ಯಾಧಿಕಾರಿ ಕರುಣಾಕರ್ ನೇತೃತ್ವದಲ್ಲಿ ಎಲ್ಲ ತಜ್ಞ ವೈದ್ಯರು ಸಹಕಾರ ನೀಡಿದರು. ಹಲವಾರು ಜನ ಇದರ ಪ್ರಯೋಜನ ಪಡೆದುಕೊಂಡರು.