ಡಿ.ವಿ.ಎಸ್.ರವರ ಸದಾಸ್ಮಿತ ಫೌಂಡೇಶನ್ ನಿಂದ ಬೆಳ್ಳಿಪ್ಪಾಡಿ-ದೇವರಗುಂಡ ತರವಾಡಿಗೆ ನೂತನ ಸಭಾಭವನ ಕೊಡುಗೆ

0

ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡರ ಪುತ್ರ ಕಾರ್ತಿಕ್ ಡಿ.ಎಸ್. ಅಧ್ಯಕ್ಷರಾಗಿರುವ ಸದಾಸ್ಮಿತ ಫೌಂಡೇಶನ್ ಬೆಂಗಳೂರು ಇದರ ವತಿಯಿಂದ ರೂ. ೫೩ ಲಕ್ಷ ವೆಚ್ಚದಲ್ಲಿ ಬೆಳ್ಳಿಪ್ಪಾಡಿ – ದೇವರಗುಂಡ ತರವಾಡಿನಲ್ಲಿ ನೂತನ ಸಭಾಭವನವನ್ನು ನಿರ್ಮಿಸಲಾಗಿದ್ದು ಅದರ ಹಸ್ತಾಂತರ ಕಾರ್ಯಕ್ರಮ ಮಾ.೨೫ರಂದು ನಡೆಯಿತು.


ಮಾ.೨೫ರಂದು ಬೆಳಗ್ಗೆ ಸಭಾಭವನದಲ್ಲಿ ಗಣಪತಿ ಹವನ ನಡೆಸಲಾಯಿತು. ಬಳಿಕ ಡಿ.ವಿ.ಸದಾನಂದ ಗೌಡರು ನೂತನ ಸಭಾಭವನವನ್ನು ತರವಾಡಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸದಾಸ್ಮಿತ ಫೌಂಡೇಶನ್ ವತಿಯಿಂದ ನಿರ್ಮಾಣವಾಗಿರುವ ಈ ಸಭಾಭವನದ ಜವಾಬ್ದಾರಿ ಮುಂದೆ ತರವಾಡಿಗೆ ಸಂಬಂಧಿಸಿದ್ದು. ಇದು ನಮ್ಮ ತರವಾಡಿಗೆ ಮೀಸಲಾಗದೆ, ಸಮಾಜದ ಮಧ್ಯಮ - ಬಡ ವರ್ಗದ ಜನರಿಗೂ ಇದರ ಸದುಪಯೋಗ ದೊರೆಯಲಿ. ಆದಾಯದ ನಿರೀಕ್ಷೆ ನಮಗೆ ಬೇಡ. ಸಾರ್ವಜನಿಕರ ಉಪಯೋಗಕ್ಕೆ ಸಿಗಲಿ'' ಎಂದು ಹೇಳಿದರು. ಬಳಿಕ ಮಾತನಾಡಿದ ಮಂಡೆಕೋಲು ಗ್ರಾ.ಪಂ. ಸದಸ್ಯ ಬಾಲಚಂದ್ರ ದೇವರಗುಂಡರುಡಿ.ವಿ.ಸದಾನಂದ ಗೌಡರು ನಮ್ಮ ಕುಟುಂಬದ ಹೆಮ್ಮೆ. ಅವರಿಂದಾಗ ಕುಟುಂಬದ ಹೆಸರು ದೇಶದಲ್ಲೇ ಗುರುತಿಸುವಂತಾಗಿದೆ. ನಮ್ಮ ತರವಾಡಿಗೆ ಪ್ರತೀ ಸಲವೂ ಒಂದಲ್ಲೊಂದು ಕೊಡುಗೆಯನ್ನು ನೀಡುತ್ತಿದ್ದಾರೆ. ಎಷ್ಟೇ ಕೆಲಸ ಕಾರ್ಯದ ಒತ್ತಡವಿದ್ದರೂ ಕುಟುಂಬದ ಪೂಜಾ, ದೈವ ಕಾರ್ಯಗಳಲ್ಲಿ ಅವರು ಭಾಗವಹಿಸಿದ್ದಾರೆ ಜತೆಗೆ ಊರಿಗ ಅಭಿವೃದ್ಧಿಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಕೊಡುಗೆ ನೀಡಿದ ಈ ಸಭಾಭವನಕ್ಕೆ ಇನ್ನಷ್ಟು ಅವಶ್ಯಕತೆಗಳು ಆಗಬೇಕಾಗಿದ್ದು ಅದನ್ನು ನಾವೆಲ್ಲರೂ ಸೇರಿ ಮಾಡೋಣ ಸದಾಸ್ಮಿತ ಫೌಂಡೇಶನ್ ನ ಎಲ್ಲರಿಗೂ ನಾವು ಋಣಿಯಾಗಿzವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ಗುಡ್ಡಪ್ಪ ಗೌಡ, ಕುಶಾಲಪ್ಪ ಗೌಡ ದೇವರಗುಂಡ, ದುಗ್ಗಪ್ಪ ಗೌಡ ದೇವರಗುಂಡ, ಬಾಲಕೃಷ್ಣ ಗೌಡ ಬೆಳ್ಳಿಪ್ಪಾಡಿ, ಚಂದ್ರಶೇಖರ ಬೆಳ್ಳಿಪ್ಪಾಡಿ, ಶೇಷಪ್ಪ ಗೌಡ ಕೊಳಂಬೆ, ಗಿರೀಶ್ ದೇವರಗುಂಡ, ಮುಕುಂದ ದೇವರಗುಂಡ, ಲಿಂಗಮ್ಮ ದೇವರಗುಂಡ, ವೀಣಾ ಭಾಸ್ಕರ್, ಡಿ.ವಿ.ಸುರೇಶ್, ಉಮೇಶ್ ದೇವರಗುಂಡ, ಮೋಹನ ದೇವರಗುಂಡ, ಹಾಗೂ ಕುಟುಂಬಸ್ಥರು ಇದ್ದರು.
ಇದೇ ಸಂದರ್ಭದಲ್ಲಿ ನೂತನ ಸಭಾಭವನದಲ್ಲಿ ಮಣೆಪೂಜೆ ನಡೆದು ಕುಟುಂಬದ ವತಿಯಿಂದ ವೆಂಕಟರಮಣ ದೇವರ ದರ್ಶನಕ್ಕೆ ಯಾತ್ರೆ ಕೈಗೊಳ್ಳಲಾಯಿತು.